×
Ad

ಆಳ್ವಾಸ್: ಜಲ ಸಂರಕ್ಷಣೆ ಕುರಿತಾದ ಬೀದಿನಾಟಕ ಪ್ರದರ್ಶನ

Update: 2017-04-11 23:12 IST

ಮೂಡುಬಿದಿರೆ, ಎ.11: ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗವು ಪರಿಸರ ಸಂರಕ್ಷಣೆ ಕುರಿತಾಗಿ ಹಮ್ಮಿಕೊಂಡಿರುವ "ಮಾರ್ಚ್ ಟುವರ್ಡ್ಸ್ ನೇಚರ್" ಜಾಗೃತಿ ಪ್ರಚಾರದ ಅಂಗವಾಗಿ ಜಲಸಂರಕ್ಷಣೆ ಕುರಿತಾದ ಬೀದಿನಾಟಕವನ್ನು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ  ಪ್ರದರ್ಶಿಸಲಾಯಿತು.

ನೀರಿನ ಅತಿಬಳಕೆ, ಜಲಮಾಲಿನ್ಯ, ನೀರಿನ ಅವಶ್ಯಕತೆ, ಜಲಸಂರಕ್ಷಣೆ, ಮಿತಬಳಕೆಯ ಅನಿವಾರ್ಯತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಬೀದಿನಾಟಕ ಮಾಡಿತು. ಜ್ವಲಂತ ಸಮಸ್ಯೆಗಳ ಕುರಿತಾಗಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಗಳನ್ನು ವೀಕ್ಷಕರಿಗೆ ವಿವರಿಸಲಾಯಿತು. ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್‌ರಾವ್ ಅವರ ಪರಿಕಲ್ಪನೆ, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಸುಧೀಂದ್ರ ನಿರ್ದೇಶನದಲ್ಲಿ ಈ ಬೀದಿ ನಾಟಕ ಮೂಡಿಬಂದಿದೆ.

ಹಾಡುಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿ ನಿರಂಜನ್ ಕಡ್ಲಾರು ರಚಿಸಿದ್ದಾರೆ. ಸಂಭಾಷಣೆ, ಗೀತ ಗಾಯನ ಹಾಗೂ ಸಂಗೀತವನ್ನು ವಿದ್ಯಾರ್ಥಿಗಳೇ ಸಂಯೋಜಿಸಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ನಾಟಕದಲ್ಲಿ ಅಭಿನಯಿಸಿದ್ದು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇತರೆ ಸಂಸ್ಥೆಗಳು ಸೇರಿದಂತೆ ಹಲವಾರು ಕಡೆಗಳಲ್ಲಿ ಬೀದಿನಾಟಕದ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ ಎಂದು ಆಳ್ವಾಸ್ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಬಾಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News