ಮರ್ಧಾಳ: ಬಾಲಕಿಗೆ ಬೈಕ್ ಢಿಕ್ಕಿ
Update: 2017-04-12 20:56 IST
ಕಡಬ,ಎ.12: ಸುಬ್ರಹ್ಮಣ್ಯ - ಕಡಬ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಮಿತ್ತೋಡಿ ಎಂಬಲ್ಲಿ ಬುಧವಾರ ಪಾದಚಾರಿ ಬಾಲಕಿಯೋರ್ವರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯ ಕಾಲು ಮುರಿತಕ್ಕೊಳಗಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಬಾಲಕಿಯನ್ನು ಮಿತ್ತೋಡಿ ನಿವಾಸಿ ರಝಾಕ್ ಎಂಬವರ ಪುತ್ರಿ ಮೂರನೆ ತರಗತಿಯ ರಂಝಾ ಎಂದು ಗುರುತಿಸಲಾಗಿದೆ. ಬಾಲಕಿ ತನ್ನ ಮನೆಯಿಂದ ಮರ್ಧಾಳ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಢಿಕ್ಕಿಯಾಗಿದೆ.
ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.