×
Ad

ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್‌: ಕಲ್ಕುಡೆ, ರಾಯಲ್, ಬ್ರಾಂಡ್ ವಿಷನ್ ತಂಡಗಳಿಗೆ ಜಯ

Update: 2017-04-12 23:02 IST

ಗಳೂರು, ಎ. 12: ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಸುರಕ್ಷಾ ಕೋಸ್ಟಲ್ ವುಡ್ ಕ್ರಿಕೆಟ್‌ ಪ್ರೀಮಿಯರ್‌ ಲೀಗಿನ ಎರಡನೆ ದಿನದ ಪಂದ್ಯಾಟದಲ್ಲಿ ಕಲ್ಕುಡೆ ಲಯನ್ಸ್, ರಾಯಲ್‌ ರೇಂಜರ್ಸ್‌, ಬ್ರಾಂಡ್ ವಿಷನ್ ತಂಡಗಳು ಜಯ ಗಳಿಸಿದೆ.

ಕಲ್ಕುಡೆ ಲಯನ್ಸ್ ತಂಡವು 10 ಓವರ್ ಗಳಲ್ಲಿ ಆಶೀಷ್‌ರವರ ಅಜೇಯ ಅರ್ಧ ಶತಕದ ನೆರನಿಂದ 2 ವಿಕೆಟ್‌ಗಳ ನಷ್ಟಕ್ಕೆ 104 ರನ್‌ಗಳನ್ನು ಗಳಿಸಿತು. ಚಿನ್ನು ಅಜೇಯ 35 ರನ್‌ಗಳನ್ನು ಗಳಿಸಿದರು. ಇದಕ್ಕೆ ಉತ್ತರವಾಗಿ ಹೋರಾಟ ನೀಡಿದ ಗ್ಲಿಟ್ಝ್ ಗ್ಲೇಡಿಯೇಟರ್ಸ್‌ ತಂಡವು 10 ಓವರುಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 98 ರನ್‌ಗಳನ್ನಷ್ಟೆ ಗಳಿಸಲು ಶಕ್ತವಾಗಿ 6 ರನ್‌ಗಳ ಅಂತರದಿಂದ ಪರಾಜಯಗೊಂಡಿತು. ರಾಕೇಶ್ 33, ಸಂದೀಪ್ 20 ರನ್‌ಗಳನ್ನು ಗಳಿಸಿದರೆ, ಪ್ರಕಾಶ್ 28ಕ್ಕೆ 2 , ಆಶೀಷ್ 4ಕ್ಕೆ 2 ವಿಕೆಟ್‌ಗಳನ್ನು ಪಡೆದು ತಂಡದ ಜಯಕ್ಕೆ ಕಾರಣರಾದರು.

ಬ್ರಾಂಡ್ ವಿಷನ್‌ ಟಸ್ಕರ್‌ಗೆ ಎರಡನೆ ಜಯ: ಬ್ರಾಂಡ್ ವಿಷನ್‌ ಟಸ್ಕರ್‌ನ ಸಚಿಂದ್ರ 16ಕ್ಕೆ 4, ಸಂಪತ್ 9ಕ್ಕೆ 2, ಪೃಥ್ವಿ 7ಕ್ಕೆ 2 ಇವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿದ ಜುಗಾರಿ ವಾರಿಯರ್ಸ್‌ ತಂಡವು ಕೇವಲ 41 ರನ್‌ಗಳಿಗೆ ಸರ್ವ ಪತನವನ್ನು ಕಂಡಿತು. ಬ್ರಾಂಡ್ ವಿಷನ್‌ ತಂಡವು 4ನೆ ಓವರಿನಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ಗುರಿಯನ್ನು ತಲುಪಿ ಆರು ವಿಕೆಟ್‌ಗಳ ಅಂತರದ ಜಯವನ್ನು ಸಾಧಿಸಿತು. ಇದು ಬ್ರಾಂಡ್ ವಿಷನ್ ಟಸ್ಕರ್‌ನ ಎರಡನೆಯ ಜಯವಾಗಿದೆ.

ರಾಯಲ್‌ ರೇಂಜರ್ಸ್‌ಗೆ ಗೆಲುವು: 
ದಿನದ ಮೂರನೆಯ ಪಂದ್ಯಾಟದಲ್ಲಿ ರಾಯಲ್ ರೇಂಜರ್ಸ್‌ ತಂಡವು 10 ಓವರುಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 91 ರನ್ ಗಳಿಸಿತು. ಅರ್ಜುನ್ ಕಾಪಿಕಾಡ್ 26, ಸ್ಯಾಂಡಿ 22, ಮಾಣಿಕ್ 23 ರನ್‌ಗಳನ್ನು ಗಳಿಸಿದರು. ಇದಕ್ಕುತ್ತರವಾಗಿ ಕೊಡಿಯಾಲ್‌ಬೈಲ್ ಚಾಲೇಂಜರ್ಸ್‌ನ ಗೀತೇಶ್ 16ಕ್ಕೆ3, ಮಾಣಿಕ್ 9ಕ್ಕೆ 3 ಬಿಗು ಬೌಲಿಂಗ್ ದಾಳಿಯೆದುರು ಚಾಲೇಂಜರ್ಸ್‌ ತಂಡವು 10 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟದಲ್ಲಿ 57 ರನ್‌ಗಳನ್ನು ಮಾತ್ರ ಗಳಿಸಿ 34 ರನ್‌ಗಳ ಅಂತರದ ಸೋಲನ್ನು ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News