ಕಾರ್‌ಸ್ಟ್ರೀಟ್: ಆಧಾರ್ ಕಾರ್ಡ್ ನೋಂದಣಿಗೆ ಚಾಲನೆ
Update: 2017-04-13 15:55 IST
ಮಂಗಳೂರು, ಎ.13: ನಗರದ ಕಾರ್‌ಸ್ಟ್ರೀಟ್‌ನ ಸರಕಾರಿ ಸಂಯುಕ್ತ ಪದಪೂರ್ವ ಕಾಲೇಜಿನಲ್ಲಿ ನಡೆದ ಆಧಾರ್ ಕಾರ್ಡ್ ನೋಂದಣಿ ಅಭಿಯಾನಕ್ಕೆ ರಾಜ್ಯ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಚಾಲನೆ ನೀಡಿದರು.
ಎ.ಜೆ. ಆಸ್ಪತ್ರೆ ಮಹಾವಿದ್ಯಾಲಯದ ಪ್ರಸೂತಿ ತಜ್ಞೆ ಡಾ. ಕವಿತಾ ಐವನ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮನಪಾ ನಾಮ ನಿರ್ದೇಶಿತ ಸದಸ್ಯೆ ಮಮತಾ ಶೆಣೈ, ಬಂದರ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಮುಸ್ತಫಾ, ಆರ್ಲನ್ಸ್ ಡಿಕುನ್ಹ, ಎನ್.ಪಿ ಮನುರಾಜ್, ಹಬೀಬುಲ್ಲಾ ಕಣ್ಣೂರು, ಸತೀಶ್ ಪೆಂಗಲ್, ನರಸಿಂಹ ಶೆಣೈ, ನವೀನ್ ಸ್ಟೀವನ್ ಉಪಸ್ಥಿತರಿದ್ದರು.