ಮೇಲಂಗಡಿ ಹೊಸಪಳ್ಳಿಯಲ್ಲಿ ರಾತೀಬು ನೇರ್ಚೆ ಸಮಾಪನ
ಮಂಗಳೂರು, ಎ.13: ಪರಕೀಯರನ್ನು ಅಟ್ಟಿದ ರಾಣಿ ಅಬ್ಬಕ್ಕ, ಮಹಾತ್ಮರಾದ ಸೈಯದ್ ಮದನಿ ತಂಙಳ್ ತಂಗಿದ, ಸರ್ವಧರ್ಮಗಳ ನೆಲೆಬೀಡಾಗಿ ಸೌಹಾರ್ದ ಸ್ಥಾಪಿಸಲ್ಪಟ್ಟ ಉಳ್ಳಾಲವು ದ.ಕ.ಜಿಲ್ಲೆಗೆ ಹೃದಯವಿದ್ದಂತೆ ಎಂದು ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.
ಉಳ್ಳಾಲ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ನಡೆದ 87ನೆ ರಾತೀಬು ನೇರ್ಚೆ, ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.
ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಖತೀಬ್ ಯೂಸುಫ್ ಮಿಸ್ಬಾಹಿ, ನ್ಯಾಯವಾದಿ ಕೆ.ಪಿ.ಶುಕೂರ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಎಚ್.ಅಹ್ಮದ್ ಬಾವ, ಇಬ್ರಾಹೀಂ ಖಾಸಿಂ, ಅಶ್ರಫ್ ಮುಸ್ಲಿಯಾರ್, ಅಲಿ ಅಕ್ಬರ್, ಜಮಾಲ್ ಬಾರ್ಲಿ, ಆಸಿಫ್ ಅಬ್ದುಲ್ಲಾ, ಬಾವಾ ಅಹ್ಮದ್, ಅಹ್ಮದ್ ಕಬೀರ್, ಅದ್ದು ಹಾಜಿ, ಮುಸ್ತಫಾ ಇಸ್ಮಾಯೀಲ್, ಬಾವ ಫಕೀರ್ ಸಾಹೇಬ್, ಯು.ಕೆ.ಯೂಸುಫ್ ಉಳ್ಳಾಲ್, ಯು.ಕೆ.ಮುಸ್ತಫಾ ಬಾವ ಮಂಚಿಲ, ಅಬ್ದುಲ್ ಹಮೀದ್ ಬೀಜಮಾರ್ ಉಪಸ್ಥಿತರಿದ್ದರು.