ಸರಕಾರರಿಂದ ಬಡವರಿಗಾಗಿ ಪಶುಭಾಗ್ಯ ಯೋಜನೆ;ಶಕುಂತಳಾ ಶೆಟ್ಟಿ
ಪುತ್ತೂರು,ಎ.13: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಬಾಗ್ಯ, ಕ್ಷೀರ ಬಾಗ್ಯ, ಹಾಲಿಗೆ ಪ್ರೋತ್ಸಾಹಧನದ ಜೊತೆಗೆ ಪಶುಭಾಗ್ಯ ಎಂಬ ಯೋಜನೆಯನ್ನು ರೂಪಿಸಿ ಬಡವರ ಆರ್ಥಿಕ ಸಶಕ್ತತೆಗಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಗುರುವಾರ ತಾಪಂ ಸಭಾಂಗಣದಲ್ಲಿ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಜ್ಯ ಸರಕಾರದ ಪಶುಭಾಗ್ಯ ಮತ್ತು ರಾಜ್ಯ ವಲಯದಲ್ಲಿ ವಿಶೇಷ ಘಟಕದ ಗಿರಿಜನ ಉಪಯೋಜನೆಯಡಿಯಲ್ಲಿ ಫಲಾನುವಿಗಳಿಗೆ ಸಹಾಯಧನ ಆದೇಶ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಪಡಿತರ ಅಕ್ಕಿಯನ್ನು 1ರೂ. ಗೆ ನೀಡಿ ಜೊತೆಗೆ ಕ್ಷೀರ ಭಾಗ್ಯ ಜಾರಿಗೆ ತಂದರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಿಸಿ ಇದೀಗ ಅವರು ಪಶು ಭಾಗ್ಯ ಯೋಜನೆಯಿಂದ ಸಾಮಾನ್ಯ ಬಡವರಿಗೂ ಸಹಾಯಧನದ ಮೂಲಕ ಪಶುಸಂಗೋಪನೆಗೆ ಆದ್ಯತೆ ನೀಡಿದರು ಎಂದು ತಿಳಿಸಿದರು.
ಈ ವೇಳೆ ಅರ್ಹ 86 ಫಲಾನುಭವಿಗಳಿಗೆ ಪಶುಭಾಗ್ಯ ಮತ್ತು ರಾಜ್ಯ ಘಟಕದಿಂದ ಪರಿಶಿಷ್ಟ ಜಾತಿಯವರಿಗೆ 6, ಪರಿಶಿಷ್ಟ ಪಂಗಡದವರಿಗೆ 4 ಸಹಾಯಧನದ ಆದೇಶ ಪತ್ರ ವಿತರಣೆ ಮಾಡಿದರು.
ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಶುಭಾಗ್ಯ ಯೋಜನೆಯು ಹಿಂದೆ ಕೇವಲ ಸೀಮಿತಿ ಸಮುದಾಯಕ್ಕೆ ಮಾತ್ರ ನೀಡಲಾಗುತಿತ್ತು.ಇದರಲ್ಲಿ ಹೈನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಅಮೃತ ಯೋಜನೆಯಲ್ಲಿ ಆಡು ಸಾಕಣಿಕೆಗೆ ಸರಕಾರ ವತಿಯಿಂದ 7 ಸಾವಿರ ರೂ. ನೀಡುಲಾಗುತ್ತಿದೆ.ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಶುಭಾಗ್ಯ ಯೋಜನಾ ಸಮಿತಿಯ ಸದಸ್ಯರಾದ ಶ್ಯಾಮ ಸುಂದರ ರೈ ಕೊಳ್ತಿಗೆ, ಅನುಶ್ರೀ ಅರಿಯಡ್ಕ, ಅನಿತಾ ಬೆಟ್ಟಂಪಾಡಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಶ್ರೀಧರ್.ಕೆ, ಡಾ. ಅನಿತಾ ಕೊಳ್ತಿಗೆ, ಶ್ರೀಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.