ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಜನಜಾಗೃತಿ ಅಗತ್ಯ: ಮಧ್ಯಸ್ಥ
ಮಂಗಳೂರು,ಎ.13: ಪ್ಲಾಸ್ಟಿಕ್ ಇಂದು ಜಗತ್ತಿನಲ್ಲಿ ಅನಿವಾರ್ಯತೆವಾಗಿದ್ದರೂ, ಅದರ ದುಷ್ಪರಿಣಾಮದ ಅರಿವು ಜನತೆಯಲ್ಲಿ ಮೂಡಿಸುವ ಮೂಲಕ ಅದರ ಬಳಕೆಯ ಪ್ರಮಾಣವನ್ನು ತಗ್ಗಿಸಬೇಕಾದ ಅಗತ್ಯವಿದೆ ಎಂದು ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮಧ್ಯಸ್ಥ ತಿಳಿಸಿದರು.
ಗುರುವಾರ ನಡೆದ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಜಾಗೃತಿ 'ವಿಸ್ತಾರ ಕಾರ್ಯಕ್ರಮದ' ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಪ್ಲಾಸ್ಟಿಕ್‌ನ 3 ಆರ್ (ರೀಯೂಸ್, ರೆಡ್ಯೂಸ್, ರಿಸೈಕಲ್) ತತ್ವಗಳಿಗೆ ಬದ್ಧರರಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎನ್.ಜಿ.ಬಸವರಾಜು, ಶಿಕ್ಷಕಿ ಶ್ರೀಲತಾ, ವಿದ್ಯಾರ್ಥಿ ನಾಯಕ ಶರಣಪ್ಪ ಉಪಸ್ಥಿತರಿದ್ದರು.ಉಪನ್ಯಾಸಕ ಅಶೋಕ ಕಾಮತ್ ಪ್ರಾಸ್ತಾಕವಾಗಿ ಮಾತನಾಡಿದರು.ಸ್ಮಿತಾ ಸ್ವಾಗತಿಸಿದರು. ಭವ್ಯಾ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ಈ ವೇಳೆ 'ಪ್ಲಾಸ್ಟಿಕ್ ನಿಷೇಧಿಸಿ; ಭೂಮಿಯನ್ನು ಉಳಿಸಿ' ಎಂಬ ಜಾಗೃತಿ ಜಾಥಾವನ್ನು ನಡೆಸಲಾಯಿತು. ಪೇಪರ್ ಕ್ಯಾರಿಬಾಗ್‌ಗಳನ್ನು ಸಾಂಕೇತಿಕವಾಗಿ ಸಾರ್ವಜನಿಕರಿಗೆ ವಿತರಿಸಲಾಯಿತು.