ಶ್ರೀನಗರ ಲೋಕಸಭಾ ಕ್ಷೇತ್ರ: ಮರು ಮತದಾನ ನೀರಸ; ಶೇ.2ರಷ್ಟು ಮತದಾನ

Update: 2017-04-13 15:34 GMT

   ಶ್ರೀನಗರ , ಎ.13: ಎ.9ರಂದು ನಡೆದಿದ್ದ ಉಪಚುನಾವಣೆಯ ಮತದಾನ ಸಂದರ್ಭ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಶ್ರೀನಗರ ಲೋಕಸಭಾ ಕ್ಷೇತ್ರದ 38 ಮತದಾನ ಕೇಂದ್ರದಲ್ಲಿ ಗುರುವಾರ ನಡೆದ ಮರುಮತದಾನ ಅತ್ಯಂತ ನೀರಸವಾಗಿದ್ದು ಕೇವಲ ಶೇ.2ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ.

  ಬುದ್‌ಗಾಂವ್ ಜಿಲ್ಲೆಯ ಸೋಯ್‌ಬಾಘ್ ಎಂಬಲ್ಲಿ ನಡೆದ ಕಲ್ಲೆಸೆತದ ಘಟನೆ ಬಿಟ್ಟರೆ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ಮತ ಚಲಾಯಿಸಿದ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಪಿಡಿಪಿ ಪಕ್ಷದ ಕಾರ್ಯಕರ್ತರ ಮಧ್ಯೆ ವಾಗ್ಯುದ್ದ ನಡೆದ ಘಟನೆ ಬದ್ರಾನ್ ನಗರದಲ್ಲಿ ನಡೆಯಿತು. ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಎ.9ರಂದು ನಡೆದಿದ್ದ ಮತದಾನ ಸಂದರ್ಭ ಭಾರೀ ಹಿಂಸಾಚಾರ ನಡೆದಿದ್ದು ಪರಿಸ್ಥಿತಿ

 ನಿಯಂತ್ರಿಸಲು ಭದ್ರತಾ ಪಡೆಗಳು ನಡೆಸಿದ ಗೋಲೀಬಾರ್‌ನಲ್ಲಿ 8 ಮಂದಿ ಹತರಾಗಿದ್ದರು. ಈ ಕ್ಷೇತ್ರದ 38 ಬೂತ್‌ಗಳಲ್ಲಿ ಇಂದು ಮರುಮತದಾನ ನಡೆದಿದೆ. ಎಪ್ರಿಲ್ 15ರಂದು ಫಲಿತಾಂಶ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News