ಸೂರಲ್ಪಾಡಿ ಕೇಂದ್ರ ಜುಮಾ ಮಸೀದಿಯ ಪದಾಧಿಕಾರಿಗಳ ಆಯ್ಕೆ
Update: 2017-04-13 23:16 IST
ಮಂಗಳೂರು, ಎ.13: ಸೂರಲ್ಪಾಡಿಯ ಮಲ್‌ಹರುಲ್ ಅವಾಕಿಫ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಸೂರಲ್ಪಾಡಿ ಆಯ್ಕೆಯಾಗಿದ್ದಾರೆ.
ಇವರು ಒಂದು ಬಾರಿ ಮಳಲಿ ಮಂಡಲ ಪ್ರಧಾನರಾಗಿ, ಮೂರು ಬಾರಿ ಗಂಜಿಮಠ ಗ್ರಾಪಂ ಅಧ್ಯಕ್ಷರಾಗಿ, ಎರಡು ಬಾರಿ ಜಿಲ್ಲಾ ವಕ್ಪ್ ಬೋರ್ಡ್ ಸದಸ್ಯರಾಗಿ,ಹಾಗೂ ಮಳಲಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು.
ಮಸೀದಿಯ ಉಪಾಧ್ಯಕ್ಷರಾಗಿ ಆಲಿಯಬ್ಬ ಗ್ಯಾಲಕ್ಸಿ, ಕಾರ್ಯದರ್ಶಿಯಾಗಿ ಶೇಖ್ ಮುಖ್ತಾರ್, ಜೊತೆ ಕಾರ್ಯದರ್ಶಿಯಾಗಿ ಬಿ.ಎಸ್. ಮುಹಮ್ಮದ್ ಶರೀಫ್, ಕೋಶಾಧಿಕಾರಿಯಾಗಿ ಆರ್.ಎಸ್. ಮುಹಮ್ಮದ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ 25 ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.