×
Ad

ಎ.21ರಿಂದ ರಾಷ್ಟ್ರೀಯ ವಿಚಾರ ಸಂಕಿರಣ

Update: 2017-04-14 00:03 IST

ಮಂಗಳೂರು, ಎ.13: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗವು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಹಯೋಗದೊಂದಿಗೆ ಎ.21 ಮತ್ತು 22ರಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಎಂಬಿಎ ವಿಭಾಗದ ಡೀನ್ ಪ್ರೊ. ಪಿ. ರಾಮಕೃಷ್ಣ ಚಡಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶ್ರಮಿಕ ವರ್ಗ, ಇಂಜಿನಿಯರ್‌ಗಳು ಮತ್ತು ಮ್ಯಾನೇಜರ್‌ಗಳ ಕೌಶಲ್ಯಾ ಭಿವೃದ್ಧಿ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆ ಯಲಿದೆ. ಇದರ ಪೂರ್ವಭಾವಿಯಾಗಿ ಎ.20ರಂದು ಕೌಶಲ್ಯಾ ಭಿವೃದ್ಧಿ ಪಠ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಆಯೋ ಜಿಸಿರುವುದಾಗಿ ತಿಳಿಸಿದರು.

ಎಸ್‌ಎಂಇ (ವಿದ್ಯಾರ್ಥಿ ಕೌಶಲ ಘಟಕ)ಸ್ಪರ್ಧೆಯು ಇಂಜಿನಿಯರಿಂಗ್‌ನ ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಮತ್ತು ಸಿಐಟಿ ವಿಭಾಗಗಳಲ್ಲಿ ನಡೆಯಲಿದೆ. ಎ.22ರಂದು ವಿಜೇತ ತಂಡವನ್ನು ಆಯ್ಕೆ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಡಾ. ನಾಗೇಂದ್ರ, ಪ್ರೊ. ಗುರುದತ್ ಸೋಮಯಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News