ತಂಬಾಕು ಉತ್ಪನ್ನ ಮಾರಾಟ ಅಂಗಡಿಗೆ ದಾಳಿ: ದಂಡ ವಸೂಲಿ

Update: 2017-04-13 18:39 GMT

ಉಡುಪಿ, ಎ.13: ಅಪರ ಜಿಲ್ಲಾಧಿಕಾ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಭದ್ರತೆ ಮತ್ತು ಪೊಲೀಸ್ ಇಲಾಖೆಗಳು ಸಂಯುಕ್ತವಾಗಿ ಕುಂದಾಪುರ ತಾಲೂಕಿನಲ್ಲಿ ಕೋಟ್ಪಾ-2003 ಕಾಯ್ದೆ ಅನುಷ್ಠಾನಗೊಳಿಸಲು ತಂಬಾಕು ಉತ್ಪನ್ನ ವ್ಯಾಪಾರ ಮಾಡುವ ಅಂಗಡಿ ಮೇಲೆ ದಾಳಿ ನಡೆಸಿ ಸೆಕ್ಷನ್ 4ರಲ್ಲಿ 23 ಪ್ರಕರಣ ಹಾಗೂ 6ಎ ಅಡಿಯಲ್ಲಿ 12 ಪ್ರಕರಣ ದಾಖಲಿಸಿ 6,610 ರೂ.ದಂಡ ವಸೂಲಿ ಮಾಡಿದೆ.

ಅಲ್ಲದೇ ಆಹಾರ ಸುರಕ್ಷತೆ ಅಡಿಯಲ್ಲಿ 20 ಅಂಗಡಿ ಮೇಲೆ ದಾಳಿ ನಡೆಸಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 15 ಅಂಗಡಿ ಮಾಲಕರಿಗೆ ನೋಟೀಸು ನೀಡಲಾಯಿತು.

 ವಿಶ್ವ ತಂಬಾಕು ವಿರೋಧಿ ದಿನ ಮೇ 31ರೊಳಗೆ ಉಡುಪಿ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತೀ ತಾಲೂಕುಳಲ್ಲಿ ದಾಳಿಯನ್ನು ಆಯೋಜಿಸಲಾಗುತ್ತಿದೆ. ಕಾಯ್ದೆಯ ಸೆಕ್ಷನ್ 6ಬಿಯಂತೆ ಯಾವುದೇ ಶಿಕ್ಷಣ ಸಂಸ್ಥೆಯ 100 ಗಜ ವ್ಯಾಪ್ತಿ ಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ.

ಕಾರ್ಕಳ: ಕಾರ್ಕಳ ತಾಲೂಕಿನಲ್ಲೂ ತಂಬಾಕು ಉತ್ಪನ್ನ ವ್ಯಾಪಾರ ಮಾಡುವ ಅಂಗಡಿ ಮೇಲೆ ದಾಳಿ ನಡೆಸಿ ಸೆಕ್ಷನ್ 4ರಲ್ಲಿ 9 ಪ್ರಕರಣ, 6ಎ ಅಡಿ 9 ಹಾಗೂ 6ರ ಅಡಿಯಲ್ಲಿ 2 ಪ್ರಕರಣ ದಾಖಲಿಸಿ ಒಟ್ಟು 4,000 ರೂ. ದಂಡ ವಸೂಲಿ ಮಾಡಲಾಯಿತು.ಆಹಾರ ಸುರಕ್ಷತೆ ಅಡಿಯಲ್ಲಿ 12 ಅಂಗಡಿ ಮೇಲೆ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 8 ಅಂಗಡಿ ಮಾಲಕರಿಗೆ ನೋಟೀಸು ನೀಡಲಾಯಿತು.

ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ವಾಸುದೇವ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ್, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ರಾಜ್ಯ ತಂಬಾಕು ನಿಯಂತ್ರಣ ಘಟಕದ ರಾಜ್ಯ ಸಂಯೋಜಕ ಪ್ರಭಾಕರ್, ವಿಭಾಗೀಯ ಸಂಯೋಜಕ ಮಹಂತೇಶ್ ಉಳ್ಳಾಗಡ್ಡಿ, ಕಾರ್ಮಿಕ ಇಲಾಖೆಯ ಸತ್ಯನಾರಾಯಣ, ಪ್ರಸನ್ನ ಕುಮಾರ್, ಆಹಾರ ಸುರಕ್ಷತೆ ಅಧಿಕಾರಿ ವೆಂಕಟೇಶ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News