ಲೈಂಗಿಕ ಅಕ್ರಮ ದೃಶ್ಯಗಳನ್ನು ತಡೆಯಲು ನಮ್ಮ ಸಹಕಾರ: ವಾಟ್ಸ್‌ಆ್ಯಪ್

Update: 2017-04-14 06:58 GMT

ಹೊಸದಿಲ್ಲಿ, ಎ. 14: ಲೈಂಗಿಕ ಅಕ್ರಮಗಳ ದೃಶ್ಯಗಳನ್ನು ಪ್ರಸಾರವಾಗದಂತೆ ತಡೆಯಲು ನಾವು ಸಹಕರಿಸುತ್ತೇವೆ ಎಂದು ವಾಟ್ಸ್‌ಆ್ಯಪ್ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಲೈಂಗಿಕ ಅಕ್ರಮದ ದೃಶ್ಯಗಳನ್ನು ಸೋಶಿಯಲ್ ಮೀಡಿಯಗಳಲ್ಲಿ ಪ್ರಸಾರವಾಗದಂತೆ ತಡೆಯಲು ರೂಪಿಸಿದ ಪ್ಯಾನೆಲ್‌ಗೆ ನಾವು ಸಹಕಾರ ನೀಡುತ್ತೇವೆ ಎಂದು ಅದು ನ್ರಯಾಲಯಕ್ಕೆ ತಿಳಿಸಿದೆ.

ಇಂತಹ ದೃಶ್ಯಗಳನ್ನು ತಡೆಯುವ ತಂತ್ರಜ್ಞಾನವನ್ನು ಕಂಡು ಹುಡುಕಲು ನೇಮಕಗೊಂಡ ಪ್ಯಾನೆಲ್‌ನೊಡನೆ ಕೂಡಲೇ ನಾವು ಮಾತುಕತೆ ನಡೆಸುತ್ತೇವೆಂದು ವಾಟ್ಸ್‌ಆ್ಯಪ್‌ಗಾಗಿ ಹಾಜರಾದ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಎರಡು ವಾರಗಳೊಳಗೆ ವಾಟ್ಸ್‌ಆ್ಯಪ್ ಪ್ರತಿನಿಧಿಗಳು ಪ್ಯಾನೆಲ್‌ನ ಮುಂದೆ ಹಾಜರಾಗಲಿದ್ದು, ತಂತ್ರಜ್ಞಾನದ ಕುರಿತು ವಿವರಣೆ ನೀಡುತ್ತದೆ ಎಂದು ಕಪಿಲ್ ಸಿಬಲ್‌ರು ನ್ಯಾಯಮೂರ್ತಿಗಳಾದ ಮದನ್ ಬಿ. ಲಾಕೂರ್, ದೀಪಕ್ ಗುಪ್ತರ  ಪೀಠದ ಮುಂದೆ ವಿವರಣೆ ನೀಡಿದ್ದಾರೆ. ದೃಶ್ಯಗಳನ್ನು ಬ್ಲಾಕ್ ಮಾಡುವ ಕುರಿತು ಪ್ರತಿಕ್ರಿಯೆ ನೀಡಲು ಎಪ್ರಿಲ್ 11ಕ್ಕೆ ನ್ಯಾಯಾಲಯ ವಾಟ್ಸ್‌ಆ್ಯಪ್‌ಗೆ ನೋಟಿಸು ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News