×
Ad

ಉತ್ತರ ಪ್ರದೇಶ ನಗರಾಡಳಿತ ಚುನಾವಣೆಗೆ ಮತಪತ್ರಗಳ ಬಳಕೆ?

Update: 2017-04-14 12:22 IST

ಲಕ್ನೋ, ಎ.14: ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಎದ್ದಿರುವ ವಿವಾದಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಚುನಾವಣಾ ಆಯೋಗವು ರಾಜ್ಯದ ಎಲ್ಲಾ 654 ನಗರಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಮತಪತ್ರಗಳನ್ನೇ ಬಳಸುವ ಬಗ್ಗೆ ಯೋಚಿಸುತ್ತಿದೆ.

2012ರಲ್ಲಿ ನಡೆದ 14 ಮುನಿಸಿಪಲ್ ಕಾರ್ಪೊರೇಶನ್ನಿನ ಮೇಯರ್ ಮತ್ತು ಕಾರ್ಪೊರೇಟರ್ ಚುನಾವಣೆಗಳಿಗಾಗಿ ಇವಿಎಂಗಳನ್ನು ಉಪಯೋಗಿಸಲಾಗಿದ್ದರೆ, 202 ನಗರ ಪಾಲಿಕಾ ಪರಿಷತ್ ಹಾಗೂ 438 ನಗರ ಪಂಚಾಯತ್ ಚುನಾವಣೆಗಳಿಗೆ ಮತಪತ್ರಗಳನ್ನು ಬಳಸಲಾಗಿತ್ತು.

ಈ ವರ್ಷದ ಜೂನ್-ಜುಲೈ ತಿಂಗಳಲ್ಲಿ ನಡೆಯಬಹುದಾದ ನಗರಾಡಳಿತ ಸಂಸ್ಥೆಗಳ ಚುನಾವಣೆಗಳಿಗಾಗಿ ಮತಪತ್ರಗಳನ್ನೇ ಉಪಯೋಗಿಸುವ ಸಾಧ್ಯತೆಯಿದೆ. ‘‘ಚುನಾವಣಾ ಆಯೋಗ ನಮಗೆ ಲೇಟೆಸ್ಟ್ ತಂತ್ರಜ್ಞಾನದ ಹೊಸ ಇವಿಎಂಗಳನ್ನು ನೀಡದೇ ಹೋದಲ್ಲಿ ನಾವು ಮತಪತ್ರಗಳನ್ನೇ ಬಳಸಬಹುದು. ಮುಖ್ಯ ಚುನಾವಣಾ ಆಯುಕ್ತರ ಪ್ರತಿಕ್ರಿಯೆಗಾಗಿ ಕಾದಿದ್ದೇವೆ’’ ಎಂದು ರಾಜ್ಯ ಚುನಾವಣಾ ಆಯುಕ್ತ ಎಸ್.ಕೆ.ಅಗರ್ವಾಲ್ ಹೇಳಿದ್ದಾರೆ.

ಇತ್ತೀಚಿಗಿನ ವಿಧಾನಸಭಾ ಚುನಾವಣೆಗಳ ಸಂದರ್ಭ ಇವಿಎಂಗಳನ್ನು ದುರುಪಯೋಗಪಡಿಸಲಾಗಿದೆ ಎಂದು ಕೆಲ ರಾಜಕೀಯ ಪಕ್ಷಗಳ ಆರೋಪಗಳಿಗೂ ರಾಜ್ಯ ಚುನಾವಣಾ ಆಯೊಗದ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News