ರಾಜಕೀಯ ಸ್ವಾರ್ಥಕ್ಕಾಗಿ ಎಲ್ಲ ಪಕ್ಷಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತಿವೆ: ಮಾಯಾವತಿ
ಲಕ್ನೊ, ಎ. 14: ಇಲ್ಲಿನಡೆದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 126ನೆ ಜಯಂತಿಸಂದರ್ಭದಲ್ಲಿ ಮಾತಾಡಿದ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ’ ಎಲ್ಲ ರಾಜಕೀಯ ಪಕ್ಷಗಳು ಮತಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಜಯಂತಿಯನ್ನು ಆಚರಿಸುತ್ತಿದೆ. ಎಲ್ಲ ಪಕ್ಷಗಳು ಜಾತಿಯ ಆಧಾರದಲ್ಲಿ ತಮ್ಮ ಅನುಯಾಯಿಗಳ ಶೋಷಣೆ ನಡೆಸಿವೆ. ಬಾಬಾಸಾಹೇಬರು ದಲಿತರು, ಆದಿವಾಸಿ ಮತ್ತು ಮೂಲೆಗೊತ್ತಲ್ಪಟ್ಟ ವರ್ಗಗಳಿಗಾಗಿ ಕೆಲಸ ಮಾಡುತ್ತಿದ್ದರು. ಈಗ ಎಲ್ಲ ಪಕ್ಷಗಳು ವೋಟು ರಾಜಕೀಯಕ್ಕಾಗಿ ಅವರನ್ನು ಬಳಸುತ್ತಿವೆ" ಎಂದು ಹೇಳಿದ್ದಾರೆ.
ಬಿಜೆಪಿ ಕೇವಲ ದಲಿತರ ಓಲೈಕೆಗಾಗಿ ಕಾರ್ಯಕ್ರಮ ಆಯೋಜಿಸಿದೆ:
ಹಿಂದೂವಾದಿ ವರ್ಣ ವ್ಯವಸ್ಥೆಯ ಪ್ರಕಾರ ದಲಿತರನ್ನು ಶೂದ್ರ ಮತ್ತು ಅತಿಶೂದ್ರ ರ ಹೆಸರಿನಲ್ಲಿ ಕರೆಯಲಾಗುತ್ತದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಇಂದು ಅಂಬೇಡ್ಕರ್‌ಜಯಂತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆದರೆ ಇವೆಲ್ಲವೂ ಹೆಚ್ಚೆಚ್ಚು ದಲಿತರನ್ನು ಆಕರ್ಷಿಸಲು ದಲಿತರನ್ನು ಓಲೈಸುವ ಪ್ರಯತ್ನವಾಗಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.