ಮಂಗಳೂರು: ಕಾರ್ಪ್ ಬ್ಯಾಂಕ್ ನ ಕ್ಯಾಶ್ ಕ್ಯಾಬಿನ್ ನಲ್ಲಿ ಬೆಂಕಿ
Update: 2017-04-14 18:12 IST
ಮಂಗಳೂರು, ಎ.14: ನಗರದ ಎಂ.ಜಿ. ರಸ್ತೆಯಲ್ಲಿರುವ ಕಾರ್ಪ್ ಬ್ಯಾಂಕ್ ನ ಕ್ಯಾಶ್ ಕ್ಯಾಬಿನ್ ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಸಂಜೆ 5:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಕ್ಯಾಬಿನ್ ನಲ್ಲಿದ್ದ ಕ್ಯಾಶ್ ಕೌಂಟಿಂಗ್ ಮೆಷಿನ್, ಒಂದು ಫೈಲ್ ಹಾಗೂ ಪುಸ್ತಕ ಹಾನಿಗೀಡಾಗಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಇಂದು ಬ್ಯಾಂಕ್ ಗೆ ರಜೆಯಿದ್ದರೂ ಲೆಕ್ಕಪರಿಶೋಧನೆ ನಡೆಯುತ್ತಿದ್ದುದರಿಂದ ಮ್ಯಾನೇಜರ್ ಬ್ಯಾಂಕ್ ನಲ್ಲಿದ್ದು, ಬೆಂಕಿ ತಗಲಿರುವ ವಿಚಾರ ಅವರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಎಸಿಪಿ ಉದಯ ನಾಯಕ್ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.