ದಲಿತ್ ಸೇವಾ ಸಮಿತಿ ವತಿಯಿಂದ: ಸ್ವಚ್ಚತಾ ಕಾರ್ಯಕ್ರಮ
Update: 2017-04-14 18:12 IST
ಪುತ್ತೂರು,ಎ.14: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೆ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ದಲಿತ್ ಸೇವಾ ಸಮತಿ ತಾಲೂಕು ಘಟಕದ ವತಿಯಿಂದ ಪುತ್ತೂರು ಬಸ್ಸು ನಿಲ್ದಾಣದ ಬಳಿಯ ಬ್ರಹ್ಮನಗರದ ದಲಿತ ಕಾಲೊನಿ ಮತ್ತು ಪುತ್ತೂರು ಮಿನಿ ವಿಧಾನ ಸೌಧದ ಹೊರಭಾಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದಲಿತ್ ಸೇವಾ ಸಮಿತಿಯ ಅಧ್ಯಕ್ಷ ಗಿರಿಧರ್ ನ್‌ಕಾ, ಮುಖಂಡರಾದ ಉಮೇಶ್ ತ್ಯಾಗರಾಜೆ, ಉಮೇಶ್ ಕ್ತಕೋಡಿ, ಧನಂಜಯ ಬಲ್ನಾಡು, ಜಯರಾಮ ನೆಲ್ಲಿಗುಂಡಿ, ಮಮತ ನೆಲ್ಲಿಗುಂಡಿ, ವಸಂತ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.