×
Ad

ಚಾರ್ಮಾಡಿಯ 3 ಸೇತುವೆ ನಿರ್ಮಾಣಕ್ಕೆ 19 ಕೋಟಿ ಮಂಜೂರು: ಸಂಸದ ನಳಿನ್

Update: 2017-04-14 20:16 IST

ಮಂಗಳೂರು, ಎ.14: ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ, ನಿಡಿಗಲ್ ಮತ್ತು ಚಾರ್ಮಾಡಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯಿಂದ 19 ಕೋಟಿ ರೂ.ಮಂಜೂರಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಂಟ್ವಾಳ -ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಅನುದಾನ ಕೋರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು.

ಈ ಹೆದ್ದಾರಿ 10 ಮೀ.ವಿಸ್ತರಿಸಲು 300 ಕೋಟಿ ರೂ.ಪ್ರಸ್ತಾಪ ಈಗಾಗಲೇ ಸಲ್ಲಿಕೆಯಾಗಿದೆ. ಎರಡು ಹಂತದ ಸರ್ವೇ ಹಾಗೂ ಸಮಗ್ರ ಯೋಜನಾ ವರದಿ ಸಿದ್ಧ ಪಡಿಸಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News