ಇನ್ನೊಂದು ಪರೀಕ್ಷೆ ನಡೆದರೆ ಯುದ್ಧ ಖಾತ್ರಿ : ಅಮೆರಿಕ

Update: 2017-04-14 15:43 GMT

ವಾಶಿಂಗ್ಟನ್, ಎ. 14: ಉತ್ತರ ಕೊರಿಯದ ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ಪ್ರತಿಯಾಗಿ ಅಮೆರಿಕವು ಸೇನಾ ಆಯ್ಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನುವುದನ್ನು ಶ್ವೇತಭವನದ ವಿದೇಶ ನೀತಿ ಸಲಹಾಕಾರರೊಬ್ಬರು ಶುಕ್ರವಾರ ಖಚಿತಪಡಿಸಿದ್ದಾರೆ.

ಇನ್ನೊಂದು ಪ್ರಚೋದನಾತ್ಮಕ ಪರೀಕ್ಷೆಯು, ಸೈನಿಕ ಕಾರ್ಯಾಚರಣೆ ಯಾವಾಗ ನಡೆಯುತ್ತದೆ ಎನ್ನುವುದನ್ನು ತೀರ್ಮಾನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಶನಿವಾರ ನಡೆಯಲಿರುವ ವಾರ್ಷಿಕ ದಿನವೊಂದರ ವೇಳೆ, ಉತ್ತರ ಕೊರಿಯವು ಪರಮಾಣು ಅಥವಾ ಕ್ಷಿಪಣಿ ಪರೀಕ್ಷೆಯನ್ನು ನಡೆಸುತ್ತದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News