ಎ.16ರಂದು ಬೈಲುಪೇಟೆ ದರ್ಗಾ ಶರೀಫ್ ಉರೂಸ್: ಸರ್ವಧರ್ಮ ಸೌಹಾರ್ದ ಕೂಟ
ಬಜ್ಪೆ, ಎ.14: ಜಮಾಲಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಬೈಲುಪೇಟೆ ಗುರುಪುರ ಇದರ ಉರೂಸ್ ಸಮಾರೋಪ ಸಮಾರಂಭ ಹಾಗೂ ಸರ್ವಧರ್ಮ ಸೌಹಾರ್ದ ಕೂಟವು ಎ.16ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ನಡೆಯಲಿದೆ ಎಂದು ಜಮಾಲಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್‌ನ ಅಧ್ಯಕ್ಷ ಹಾಜಿ ಪಿ. ಝಕರಿಯಾ ತಿಳಿಸಿದ್ದಾರೆ.
ಸಮಾರಂಭವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಲಿದ್ದು, ಗುರುಪುರ ಬಯಲುಪೇಟೆ ಜಮಾಲಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್‌ನ ಅಧ್ಯಕ್ಷ ಹಾಜಿ ಪಿ. ಝಕರಿಯಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸುರತ್ಕಲ್ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠ್ಠಲ ಸ್ವಾಮೀಜಿ, ಗುರುಪುರ ಪಾಂಪೈ ಚರ್ಚ್‌ನ ಧರ್ಮಗುರು ರೆ. ಫಾ. ಆ್ಯಂಟನಿ ಲೋಬೊ, ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಪ್ರೊಫೆಸರ್ ಅನೀಸ್ ಕೌಸರಿ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸೇರಿದಂತೆ ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಹಾಜಿ ಪಿ. ಝಕರಿಯಾ ತಿಳಿಸಿದ್ದಾರೆ