ಎಸ್‌ಎಂಎ ಸಮಿತಿಯ ಪದಾಧಿಕಾರಿಗಳ ಆಯ್ಕೆ
Update: 2017-04-14 23:46 IST
ಮಂಗಳೂರು,ಎ.14: ಎಸ್‌ಎಂಎ ಮಂಗಳೂರು ಜಿಲ್ಲಾ ಸಮಿತಿಯ ಮಹಾಸಭೆಯು ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಅವರ ಅಧ್ಯಕ್ಷತೆಯಲ್ಲಿ ಪಡೀಲ್‌ನಲ್ಲಿ ನಡೆಯಿತು. ಈ ವೇಳೆ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕತ್ತರ್ ಬಾವ ಹಾಜಿ ಕೆದುಂಬಾಡಿ, ಉಪಾಧ್ಯಕ್ಷರಾಗಿ ಸಲೀಂ ರಫೀ ಪಿ.ಎಂ., ಮೂಸಾ ಹಾಜಿ, ಸಲೀಲ್, ಕೆಕೆಎಂ ಕಾಮಿಲ್ ಸಖಾಫಿ, ಪ್ರ. ಕಾರ್ಯದರ್ಶಿಯಾಗಿ ಬಿ. ಇಬ್ರಾಹೀಂ ಖಲೀಲ್, ಜತೆ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಸಅದಿ ಕಿನ್ಯ, ಇಸ್ಮಾಯೀಲ್ ಬಿ.ಎಚ್.ಕೆ.ಸಿ.ರೋಡ್, ಅಶ್ರಫ್ ಕಿನಾರ ಮಂಗಳೂರು, ಖಾಲಿದ್ ಹಾಜಿ ಭಟ್ಕಳ, ಕೋಶಾಧಿಕಾರಿಯಾಗಿ ಬಶೀರ್ ಪಂಜಿಮೊಗರು ಅವರು ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.