ಕೆ.ಸಿ.ನಗರದಲ್ಲಿ ‘ಉಸ್ವತುನ್ ಹಸನ-14 ದಾವಾ ಕಾರ್ಯಕ್ರಮ
Update: 2017-04-15 12:26 IST
ಮಂಗಳೂರು, ಎ.15: ಕೆ.ಸಿ.ನಗರದ ಝೀನತ್ ಎಜುಕೇಶನ್ ಟ್ರಸ್ಟ್ ಅಧೀನದ ಎಸ್.ಎಸ್. ಅರೆಬಿಕ್ ಕಾಲೇಜಿನ ವತಿಯಿಂದ ಎಸ್.ಎಸ್.ನ ಸಹಯೋಗದಲ್ಲಿ 14ನೆ ವರ್ಷದ ‘ಉಸ್ವತುನ್‌ಹಸನ’ ದಾವಾ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ವಠಾರದಲ್ಲಿ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಕೇಂದ್ರ ಸಮಿತಿಯ ಅಧ್ಯಕ್ಷ ಯು.ಅಬ್ದುಲ್ ರಝಾಕ್‌ಮುಖ್ಯ ಅತಿಥಿಯಾಗಿದ್ದರು.
ಬೆಂಗಳೂರಿನ ಡಯಟ್ ಸಂಸ್ಥೆಯ ನಿರ್ದೇಶಕ ಉಮರ್ ಶರೀಫ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಕುರಆನ್ ವ್ಯಾಕರಣ ತಜ್ಞ ಮೌಲವಿ ನೌಶಾದ್ ಮದನಿ ಕಾಕವೈಲ್ ‘ಕುಆನ್ ನ ಮಾಧುರ್ಯ’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಕಾಲೇಜು ವಿದ್ಯಾರ್ಥಿಗಳ ‘ಅಲ್ ರಿಳಾ’ ಹಸ್ತಾಕ್ಷರ ಮ್ಯಾಗಝಿನನ್ನು ಹಿರಿಯ ಲೇಖಕ ಇಸ್ಮಾಯೀಲ್ ಶಾಫಿ ಬಿಡುಗಡೆಗೊಳಿಸಿದರು. ಸಂಸ್ಥೆಯ ಸಂಚಾಲಕ ಉಮರ್ ಆಶಿಕ್ ವರದಿ ಮಂಡಿಸಿದರು.