×
Ad

ಪ.ಗೋ. ಪ್ರಶಸ್ತಿ ಮೊತ್ತವನ್ನು ಕೊರಗ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೀಡಿದ ಸಂದೀಪ್ ವಾಗ್ಲೆ

Update: 2017-04-15 13:13 IST

ಮಂಗಳೂರು, ಎ.15: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2016ನೆ ಸಾಲಿನ ಪ. ಗೋ. ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಪೂರ್ವಾಹ್ನ ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಗ್ರಾಮೀಣ ವರದಿಗಾರಿಕೆಗಾಗಿ ‘ಕನ್ನಡ ಪ್ರಭ’ ಪತ್ರಿಕೆಯ ವರದಿಗಾರ ಸಂದೀಪ್ ವಾಗ್ಲೆಯವರಿಗೆ ಪ್ರಶಸ್ತಿಯನ್ನು ಅತಿಥಿಗಳು ಇಂದು ಪ್ರದಾನ ಮಾಡಿದರು.

ಇದೇವೇಳೆ ವಾಗ್ಲೆಯವರು ತನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು ಮಂಜನಾಡಿ ಸಮೀಪದ ಮೊಂಟೆಪದವಿನ ಬಡ ಕೊರಗ ಕುಟುಂಬದ ರೂಪಾ ಎಂಬ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ನೀಡಿ ಮಾದರಿಯಾದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಬಂಟ್ವಾಳ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News