ಪೋಲಿಸ್ ಪೇದೆ ಅಮಾನತು ರದ್ಧಿಗೆ ಖಂಡನೆ
ಉಡುಪಿ, ಎ.15: ಮಲ್ಪೆಯ ಪೊಲೀಸ್ ಕಾನ್‌ಸ್ಟೇಬಲ್ ಪ್ರಕಾಶ್ ಅಮಾನತು ಆದೇಶವನ್ನು ಯಾವುದೇ ತನಿಖೆ ಮಾಡದೆ, ತನಿಖೆ ಪ್ರಗತಿಯಲ್ಲಿ ರುವಾಗಲೇ ವಾಪಾಸು ಪಡೆದಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಬಾಲಕೃಷ್ಣ ಅವರ ಕ್ರಮವನ್ನು ಉಡುಪಿ ನಗರಸಭೆ ಸದಸ್ಯ ಪ್ರಶಾಂತ್ ಅಮೀನ್ ಖಂಡಿಸಿದ್ದಾರೆ.
ಜನರಿಗೆ ಸತ್ಯ ಸಂಗತಿ ತಿಳಿಸುವುದನ್ನು ಬಿಟ್ಟು ತಮಗೆ ಬೇಕಾದ ರೀತಿಯಲ್ಲಿ ವರ್ತಿಸುವುದು, ಉಡುಪಿಯಲ್ಲಿ ಪೋಲೀಸ್ ವ್ಯವಸ್ಥೆ ಎಷ್ಟು ಹಳ್ಳ ಹಿಡಿದಿದೆ ಎಂಬುದಕ್ಕೆ ಸಾಕ್ಷಿ. ತನಿಖೆಯಲ್ಲಿ ಪೇದೆ ಪ್ರಕಾಶ್ ನಿರಪರಾಧಿ ಎಂದು ಸಾಬೀತಾ ಗಿದ್ದಾನೆಯೇ? ಕೇವಲ ಪೋಲೀಸ್ ನಿಷೇದಿತ ಮಹಾಸಂಘದ ಗಡಿಪಾರಾದ ಅಧ್ಯಕ್ಷ ವಿ.ಶಶಿಧರ್ ಅವರ ಪ್ರತಿಭಟನೆಗೆ ಹೆದರಿ ರಾಜ್ಯ ಸರಕಾರ ಅಮಾನತು ಆದೇಶವನ್ನು ವಾಪಾಸು ಪಡೆದಿರುವುದು ದುರದೃಷ್ಟಕರ ಎಂದು ಅವರು ಟೀಕಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಅಮಾಯಕ ಕಾರ್ಮಿಕರಿಗೆ ತೊಂದರೆ ಆದ ಸಂದರ್ಭದಲ್ಲಿ ಪೋಲೀಸ್ ಬಳಿ ಅಥವಾ ರಾಜಕೀಯದವರ ಬಳಿ ಹೋಗದೆ ನಿಷೇಧಿತ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ಮೊರೆ ಹೋಗುವುದು ಸೂಕ್ತ. ಉಡುಪಿಯಲ್ಲಿ ದಕ್ಷ ಪೋಲೀಸ್ ಅಧಿಕಾರಿಗಳ ಕೊರತೆ ಇದೆ. ದಕ್ಷ ಅಧಿಕಾರಿಗಳು ಇದ್ದಲ್ಲಿ ಇಂತಹ ನಾಟಕ ನಡೀತಾ ಇರಲಿಲ್ಲ. ಸಚಿವರು ಇನ್ನಾದರು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.