ವಿಶೇಷ ಮಕ್ಕಳೊಂದಿಗೆ ವಿಶ್ವ ದೃಶ್ಯ ಕಲಾ ದಿನಾಚರಣೆ
Update: 2017-04-15 19:08 IST
ಉಡುಪಿ, ಎ.15: ಉಡುಪಿ ಆರ್ಟಿಸ್ಟ್ ಫೋರಂ ಮತ್ತು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ಇದರ ಸಹಯೋಗದೊಂದಿಗೆ ವಿಶ್ವ ದೃಶ್ಯ ಕಲಾ ದಿನಾಚರಣೆ ಯನ್ನು ಶನಿವಾರ ಉಡುಪಿಯ ವಿಶೇಷ ಮಕ್ಕಳ ಶಾಲೆ ಆಶಾ ನಿಲಯದಲ್ಲಿ ಆಯೋಜಿಸಲಾಗಿತ್ತು.
ಆಶಾ ನಿಲಯದ ವಿಶೇಷ ಮಕ್ಕಳು ಚಿತ್ರ ಬರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಎಚ್.ವಿಶ್ವನಾಥ ರಾವ್, ಹಿರಿಯ ಕಲಾವಿದ ರಮೇಶ್ ರಾವ್, ಆಶಾ ನಿಲಯದ ಮುಖ್ಯೋಪಾಧ್ಯಾಯಿನಿ ಆಗ್ನೇಸ್ ಕುಂದರ್, ವಾರ್ಡನ್ ಪ್ರಸನ್ನಿ ಸೋನ್ಸ್ ಉಪಸ್ಥಿತರಿದ್ದರು.
ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಸ್ವಾಗತಿಸಿ ಕಾರ್ಯ ಕ್ರಮ ನಿರೂಪಿಸಿದರು. ಬಳಿಕ ವಿಶೇಷ ಮಕ್ಕಳಿಗೆ ಆವೆಮಣ್ಣಿನ ಕಲಾಕೃತಿ, ಕಸ ದಿಂದ ರಸ, ಪೇಪರ್ ಕಲೆ, ಪೈಯಿಂಟ್ ಬಗ್ಗೆ ತರಬೇತಿಯನ್ನು ನೀಡಲಾಯಿತು.