×
Ad

ಮೇ.6 ರೇಡಿಯೋ ಪಾಂಚಜನ್ಯದಲ್ಲಿ ‘ಸ್ಟೋರಿ ವಿದ್ ಜೋಗಿ’ - ಕಥೆಗೆ ಆಹ್ವಾನ

Update: 2017-04-15 19:23 IST

ಪುತ್ತೂರು,ಎ.15 : ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್ ಎಂಮೇ.6 ಶನಿವಾರ ಬೆಳಗ್ಗೆ ರೇಡಿಯೋ ನಿಲಯದಲ್ಲಿ "ಸ್ಟೋರಿ ವಿದ್ ಜೋಗಿ" ಕಾರ್ಯಕ್ರಮ ಆಯೋಜಿಸಿದೆ.

ಖ್ಯಾತ ಕಥೆಗಾರ,ಪತ್ರಕರ್ತ,ಅಂಕಣಕಾರ,ಸಿನೆಮಾ ಸಂಭಾಷಣೆಕಾರ ಜೋಗಿ ಅವರ ಅಧ್ಯಕ್ಷತೆಯಲ್ಲಿ ಐದು ಮಂದಿ ಕಥೆಗಾರ,ಕಥೆಗಾರ್ತಿಯರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಬರೆದ ಕಥೆಗಳನ್ನು ಓದಲು ಅವಕಾಶವಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ತಾವು ಬರೆದ ಕಥೆಗಳನ್ನು ರೇಡಿಯೋ ಪಾಂಚಜನ್ಯ ಕಚೇರಿಗೆ ಎ.30 ರೊಳಗೆ ಕಳುಹಿಸಬೇಕು.ಕನ್ನಡದಲ್ಲಿ ಕಥೆ ಬರೆದಿರಬೇಕು.ಕಥೆ ಹತ್ತರಿಂದ ಹನ್ನೆರಡು ನಿಮಿಷಗಳ ಓದಿನ ಅವಧಿಯದ್ದಾಗಿರಬೇಕು.ಕಥೆ ಜೊತೆ ತಮ್ಮ ಸಂಪರ್ಕ ದೂರವಾಣಿಯನ್ನು ನಮೂದಿಸಿರಬೇಕು.
ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವನಿಮುದ್ರಿಸಿಕೊಂಡು ಮೇ.7 ರಂದು ಪ್ರಸಾರ ಮಾಡಲಾಗುವುದು.

 ಹೆಚ್ಚಿನ ವಿವರಗಳಿಗೆ 08251-298499, ರೇಡಿಯೋ ಪಾಂಚಜನ್ಯ,ವಿವೇಕಾನಂದ ಕ್ಯಾಂಪಸ್,ನೆಹರೂ ನಗರ,ಪುತ್ತೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ರೇಡಿಯೋ ಪಾಂಚಜನ್ಯ ಪ್ರಕಟನೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News