×
Ad

ಬ್ರ್ಯಾಂಡ್ ವಿಷನ್ ಟಸ್ಕರ್‌ಗೆ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಶಸ್ತಿ

Update: 2017-04-15 19:37 IST

ಮಂಗಳೂರು,ಎ.15: ಕರಾವಳಿಯ ಚಿತ್ರರಂಗದ ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯ ಆಸರೆಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಿದ ಸುರಕ್ಷಾ ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀವಿುಯರ್  ಲೀಗ್ ಪಂದ್ಯಾಟದ ಪಶಸ್ತಿಯನ್ನು ಬ್ರ್ಯಾಂಡ್ ವಿಷನ್ ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಮಾರ್ಕೆಟಿಂಗ್ ಸಂಸ್ಥೆಯ ಮಾಲಕತ್ವದ ಬ್ರ್ಯಾಂಡ್ ವಿಷನ್ ಟಸ್ಕರ್ ತಂಡವು ಗೆದ್ದುಕೊಂಡಿತು.

ಬ್ರ್ಯಾಂಡ್ ವಿಷನ್ ತಂಡವು ಗ್ಲಿಟ್ಝ್ ಗ್ಲೇಡಿಯೇಟರ್ಸ್‌ ತಂಡವನ್ನು ಪರಾಜಯಗೊಳಿಸಿ ಆಕರ್ಷಕ ಟ್ರೋಫಿ ಮತ್ತು ರೂ.2,00,000.00 ರೂ. ನಗದು ಬಹುಮಾನವನ್ನು ಪಡೆಯಿತು. ದ್ವಿತೀಯ ಸ್ಥಾನಿ ಗ್ಲಿಟ್ಝ್ ತಂಡವು ಟ್ರೋಫಿ ಮತ್ತು ರೂ.1,00,000.00 ರೂ. ನಗದು ಬಹುಮಾನವನ್ನು ಪಡೆಯಿತು.

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗ್ಲಿಟ್ಝ್ ಗ್ಲೇಡಿಯೇಟರ್ಸ್‌ ತಂಡವು ರಾಖೇಶ್ ದಿಲ್ಸೆರವರ 7 ಭರ್ಜರಿ ಸಿಕ್ಸರ್‌ಗಳನ್ನೊಳಗೊಂಡ 63 ರನ್‌ಗಳ ನೆರವಿನಿಂದ 10 ಓವರುಗಳಲ್ಲಿ 5ವಿಕೆಟುಗಳ ನಷ್ಟದಲ್ಲಿ 113ರ ದೊಡ್ಡ ಮೊತ್ತವನ್ನು ಕಲೆ ಹಾಕಿತು. ದೀಪಕ್ 19, ಸಂದೀಪ್ 12 ರನ್‌ಗಳನ್ನು ಗಳಿಸಿದರು. ಸಚಿಂದ್ರ 14-1, ಪ್ರೀತಮ್ 18-1, ಸಂಪತ್ 17ಕ್ಕೆ 1 ವಿಕೆಟು ಪಡೆದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News