×
Ad

ಕಣ್ಣಂಗಾರ್ ಉರೂಸ್‌ಗೆ ಚಾಲನೆ

Update: 2017-04-15 20:02 IST

ಪಡುಬಿದ್ರಿ,ಎ.15: ಇತಿಹಾಸ ಪ್ರಸಿದ್ಧ ಕಣ್ಣಂಗಾರ್ ಜುಮ್ಮಾ ಮಸೀದಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕಣ್ಣಂಗಾರ್ ಉರೂಸ್‌ಗೆ ಶುಕ್ರವಾರ ಚಾಲನೆ ದೊರೆಯಿತು.

 ಶುಕ್ರವಾರ ಜುಮಾ ಜಮಾಝಿನ ಬಳಿಕ ಕೆ.ಎಸ್.ಜಅಫರ್ ಸಾದಿಕ್ ತಂಙಳ್ ಕುಂಬೋಳ್ ಧ್ವಜಾರೋಹಣ ನೆರೆವೇರಿಸಿದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಮ್.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ಗೈದರು.

ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯಭಾಷಣ ಮಾಡಲಿದ್ದಾರೆ. ಕನ್ನಂಗಾರ್ ಮುದರ್ರಿಸ್ ಅಲ್‌ಹಾಜ್ ಅಶ್ರಫ್ ಸಖಾಫಿ ಕಿನ್ಯ, ಉರೂಸ್ ಸಮಿತಿ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್, ಕಣ್ಣಂಗಾರ್ ಜುಮ್ಮಾ ಮಸೀದಿ ಅಧ್ಯಕ್ಷ ಎಚ್.ಬಿ.ಮುಹಮ್ಮದ್, ಜಮಾಅತ್‌ನ ವಿವಿಧ ಮಸೀದಿಗಳ ಅಧ್ಯಕ್ಷರಾದ ಇಬ್ರಾಹಿಂ ಖಲೀಲ್, ಬಿಲೀಫ್ ಮೊಯ್ದು ಹಾಜಿ, ಇಬ್ರಾಹೀಂ ಖಲೀಲ್, ಎಮ್.ಎಸ್.ರಝಾಕ್, ಅಬ್ದುಲ್ ರಝಾಕ್, ಹನೀಫ್ ಕಣ್ಣಂಗಾರ್, ಉರೂಸ್ ಸಮಿತಿಯ ಕಾರ್ಯದರ್ಶಿ ರಶೀದ್ ಗುಂಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News