ಮುಡಿಪು: ಎಸ್‌ವೈಎಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ
ಕೊಣಾಜೆ,ಎ.15:ಎಸ್‌ವೈಎಸ್ ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ 9 ಜೋಡಿಗಳ ಉಚಿತ ಸಾಮೂಹಿಕ ವಿಾಹ ಕಾರ್ಯಕ್ರಮ ಮುಡಿಪುವಿನ ಬಾಳೆಪುಣಿ ಪಂಚಾಯಿತಿ ಮೈದಾನದಲ್ಲಿಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆಸಿರೋಡ್ ಮಾತನಾಡಿ,ಬಡ ಹೆಣ್ಣು ಮಕ್ಕಳ ವಿವಾಹ ನೆರವೇರಿಸಿಕೊಡುವುದು ಪುಣ್ಯದಾಯಕ ಕಾರ್ಯವಾಗಿದ್ದು ಇಂತಹ ಕಾರ್ಯಗಳಿಗೆ ನೆರವಾಗುವವರ ಕುಟುಂಬಕ್ಕೆ ಪರಲೋಕದಲ್ಲಿ ರಕ್ಷಣೆ ಖಂಡಿತಾ ಇದೆ. ಮಗಳಿಗೆ ವಿವಾಹ ಮಾಡಿಕೊಡಲು ಸಾಧ್ಯವಾಗದೇ ಕಣೀರಿಡುತ್ತಿರುವ ಕುಟುಂಬಗಳು ಬಹಳಷ್ಟು ನಮ್ಮುಂದಿವೆ. ಅದನ್ನು ಗುರುತಿಸಿ ಅಂತಹ ಕುಟುಂಬಗಳ ಹೆಣ್ಣುಮಕ್ಕಳ ವಿವಾಹ ಮಾಡಿಕೊಡುವಜವಬ್ಧಾರಿ ಮಹತ್ತರವಾದುದು. ಎಸ್‌ವೈಎಸ್ ಈ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಮಾತನಾಡಿ, ವಿವಾಹ ಕಾರ್ಯಕ್ರಮವನ್ನು ಉಚಿತವಾಗಿ ಯಾರು ಮಾಡಿಕೊಡುತ್ತಾರೋ ಅವರಿಗೆ ಸ್ವರ್ಗ ಕಟ್ಟಿಟ್ಟ ಬುತ್ತಿ. ಎಸ್‌ವೈಎಸ್ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಎಲ್ಲರೂ ಈಕಾರ್ಯ ಮೆಚ್ಚಿ ಈ ಸಂಘಟನೆಯ ಜತೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್, ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಉಸ್ತಾದ್, ಬೇಕಲ ಇಬ್ರಾಹಿಂ ಮುಸ್ಲಿಯಾರ್, ಅಶ್ರಫ್ ತಂಙಳ್ ಆದೂರು ಮಾಣಿ ಉಸ್ತಾದ್, ಎಸ್‌ವೈಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ನಿಖಾಹ್ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಶೇಖ್ ಅಬ್ದುಲ್ ಸಅದಿ ಅವರು ಫೌಝಿಯಾ ರವರನ್ನು, ಮಹಮ್ಮದ್ ಅನ್ಸಾರ್ ಖೈರುನ್ನೀಶನ್ನು, ನೌಫಲ್ ಹನಸ್‌ರವರು ಮಸೂದಳನ್ನು, ಸಾಹುಲ್ ಹಮೀದ್‌ರವರು ಶಾಯಿಲಳನ್ನು, ಅಬ್ದುಲ್ ಮುನೀರ್‌ರವರು ನಸೀಬಳ್ನು , ರಾಜಾಸಾಬ್‌ರವರು ಖೈರುನ್ನೀಸಳನ್ನು, ಇಬ್ರಾಹಿಂ ಮೂಸಬ್ಬರವರು ಖತೀಜಾ ಬಿ.ಳವನ್ನು, ಸಲೀಂ ರವರು ಆಯಿಷಾಳವಳನ್ನು, ಆರೀಫ್ ಹಸನಬ್ಬರವರು ಖೈರುನ್ನೀಸಳನ್ನು ವಿವಾಹ ಆಗಿ ಹಸಮಣೆಗೇರಿದರು.
ಎಸ್‌ವೈಎಸ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ಕಾರ್ಯದರ್ಶಿ ಬಾವಾ ಹಾಜಿ, ಮ್ಯಾರೇಜ್ ಸಮಿತಿ ಅಧ್ಯಕ್ಷ ಮಹಮೂದ್, ಕಾರ್ಯದರ್ಶಿ ಎಮ.ಎ. ಬಶೀರ್ ಮುಡಿಪು, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಏಷ್ಯನ್ ಬಾವಾ ಹಾಜಿ, ಕೆ.ಇ. ಸಾಲೆತ್ತೂರು, ಹಸನ್ ಹಾಜಿ ಸಾಂಬಾರ್ ತೋಟ ಮೊದಲಾದವರು ಉಪಸ್ಥಿತರಿದ್ದರು.