×
Ad

ಉಡುಪಿಯ ಸುಹಾಸಗೆ ಪ್ರಥಮ ರ್ಯಾಂಕ್

Update: 2017-04-15 21:38 IST

ಉಡುಪಿ, ಎ.15: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಈ ಸಾಲಿನ ಎಂಎಸ್ಸಿ (ಸಂಖ್ಯಾಶಾಸ್ತ್ರ) ಪರೀಕ್ಷೆಯಲ್ಲಿ ಉಡುಪಿಯ ಸುಹಾಸ್ ಇವರು ಪ್ರಥಮ ರ್ಯಾಂಕ್‌ನೊಂದಿಗೆ ಮೂರೂ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಧಾರವಾಡದಲ್ಲಿ ಶನಿವಾರ ನಡೆದ 67ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಮೋಹನ ಮಲ್ಲಿಕಾರ್ಜುನ ಗೌಡ ಶಾಂತನಗೌಡರ ಉಪಸ್ಥಿತಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಬಸವರಾಜ ರಾಯರೆಡ್ಡಿ ಅವರಿಂದ ಪದವಿಯನ್ನು ಸ್ವೀಕರಿಸಿದರು.

ಪ್ರಸ್ತುತ ಎಂಜಿಎಂ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಪದವಿ ಮತ್ತು ಪಿಯುಸಿ ಶಿಕ್ಷಣವನ್ನು ಎಂಜಿಎಂ ಕಾಲೇಜಿನಲ್ಲಿ, ಪ್ರೌಢ ಶಿಕ್ಷಣವನ್ನು ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಯಲ್ಲಿ ಹಾಗು ಪ್ರಾಥಮಿಕ ಶಿಕ್ಷಣವನ್ನು ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದಾರೆ. ಇವರು ಉಡುಪಿಯ ಪ್ರಸಿದ್ಧ ಕೀರ್ತನಕಾರರಾದ ಶ್ರೀಶದಾಸರ ಮೊಮ್ಮಗ ಹಾಗೂ ಪ್ರಾಣೇಶ ಮತ್ತು ಕಮಲಾಕ್ಷಿಯವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News