ವೃದ್ಧ ನಾಪತ್ತೆ
Update: 2017-04-15 22:00 IST
ಉಡುಪಿ, ಎ.15: ಕುಂಜಿಬೆಟ್ಟು ಗುಂಡಿಬೈಲು ಅನಿತಾ ನಿಲಯದ ಅಶೋಕ ಕುಮಾರ್ ಎಂಬವರ ತಂದೆ ಸುಮಾರು 65 ವರ್ಷ ಪ್ರಾಯದ ನಾರಾಯಣ ಪೂಜಾರಿ ಎ.10ರಂದು ಬೆಳಗ್ಗೆ 7:30ಕ್ಕೆಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾರಾಯಣ ಪೂಜಾರಿ ಅವರು 5.8 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಬಿಳಿ ಕಪ್ಪುಮಿಶ್ರಿತ ಕೂದಲು, ಹಣೆಯಲ್ಲಿ ಹಳೆಯ ಗಾಯದ ಗುರುತು ಇದ್ದು, ಹಸಿರು ಬಣ್ಣದ ನೀಲಿ ಚೆಕ್ಸ್ ಲುಂಗಿ ಹಾಗೂ ತುಂಬು ತೋಳಿನ ನೀಲಿ ಗೆರೆಗಳಿರುವ ಅಂಗಿ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನುಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.