ಮನೆಗೆ ನುಗ್ಗಿ ಚಿನ್ನಾಭರಣ ಕಳವು
Update: 2017-04-15 22:30 IST
ಹೆಬ್ರಿ, ಎ.15: ಮುದ್ರಾಡಿ ಎಂಬಲ್ಲಿ ಎ.14ರಂದು ಬೆಳಗ್ಗೆ ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ವೀಣಾ ಬಿ. ರಾವ್ ಬೆಳಗ್ಗೆ 10:30ರ ಸುಮಾರಿಗೆ ಮನೆಗೆ ಬೀಗ ಹಾಕಿ ಸ್ವಲ್ಪದೂರದಲ್ಲಿರುವ ಜಾಗವನ್ನು ನೋಡಲು ಹೋಗಿ ಮಧ್ಯಾಹ್ನ 12:30ಕ್ಕೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಈ ಕಳವು ನಡೆದಿದೆ. ಕಳ್ಳರು ಮನೆಯ ಎದುರು ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕೊಠಡಿಯೊಳಗಿದ್ದ ಕಪಾಟನ್ನು ಮುರಿದು ಮುತ್ತಿನ ಹಾರ, ಲಕ್ಷ್ಮಿ ಹಾರ, ಎರಡು ಸರ, ಎರಡು ಉಂಗುರ, 2 ಚಿನ್ನದ ಕಾಯಿನ್, ಬೆಂಡೋಲೆ, ಎರಡು ಬೆಳ್ಳಿಯ ಕಾಯಿನ್, ಒಂದು ಜೊತೆ ಬೆಳ್ಳಿಯ ಕಾಲು ಚೈನ್, ಒಂದು ಜೊತೆ ಕಾಲುಂಗುರ ಹಾಗೂ 4 ಸಾವಿರ ರೂ. ನಗದು ಕಳವುಗೈದಿದ್ದಾರೆ. ಇವುಗಳ ಒಟ್ಟು ವೌಲ್ಯ 2.40ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.