×
Ad

ಬ್ಯಾರಿ ಫೆಲೊಶಿಪ್ ವಿದ್ಯಾರ್ಥಿಗಳಿಗೆ ಗೌರವಧನ ಹಸ್ತಾಂತರ

Update: 2017-04-16 00:12 IST

ಮಂಗಳೂರು, ಎ.15: ಬ್ಯಾರಿ ಫೆಲೊಶಿಪ್‌ಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಫೆಲೊಶಿಪ್ ಗೌರವಧನ ಪ್ರದಾನ ಕಾರ್ಯಕ್ರಮವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಕಚೇರಿಯಲ್ಲಿ ಶನಿವಾರ ನಡೆಯಿತು.

ಬ್ಯಾರಿ ಫೆಲೊಶಿಪ್‌ವಿದ್ಯಾರ್ಥಿಗಳಾದ ನಾಝಿಯ, ಫಾಹಿಮಾ, ಫಾತಿಮಾ ರುಫೀದ, ಆಯಿಶಾ, ಸಲೀನ ಬಾನು ಹಾಗೂ ಬದ್ರುದ್ದೀನ್‌ರಿಗೆ ಫೆಲೊಶಿಪ್‌ಹಸ್ತಾಂತರಿಸಲಾಯಿತು.

ಇದೇ ವೇಳೆ ಬ್ಯಾರಿ ಫೆಲೊಶಿಪ್‌ವಿದ್ಯಾರ್ಥಿಗಳಿಗೆ ಸಂಶೋಧನೆ, ಅಧ್ಯಯನ ಮಹತ್ವದ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ, ಪ್ರೊ. ಸುರೇಂದ್ರ ರಾವ್, ಪ್ರೊ. ಎ.ವಿ. ನಾವಡ, ಪ್ರೊ. ಬಿ.ಎಂ. ಇಚ್ಲಂಗೋಡು, ಬಿ.ಎ. ಶಂಸುದ್ದೀನ್ ಮಡಿಕೇರಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News