ಎಸ್‌ಐಒನಿಂದ ‘ಚಿಣ್ಣರ ನಡಿಗೆ’ ಜಲ ಜಾಗೃತಿ
Update: 2017-04-16 00:13 IST
ಮಂಗಳೂರು, ಎ.15: ಎಸ್‌ಐಒ ಜಿಲ್ಲಾ ಘಟಕದ ವತಿಯಿಂದ ಜಲ ಜಾಗೃತಿಗಾಗಿ ‘ಚಿಣ್ಣರ ನಡಿಗೆ’ ಶನಿವಾರ ನಗರದ ಮಿನಿ ವಿಧಾನಸೌಧದಿಂದ ದ.ಕ. ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು.
ನೀರಿನ ಕೊಡವನ್ನು ಹಸ್ತಾಂತರಿಸುವ ಮೂಲಕ ಉದ್ಫಾಟಿಸಿದ ಎಸ್.ಐ.ಒ. ಮಂಗಳೂರು ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಮುಬೀನ್, ಜಲ ಜಾಗೃತಿಗಾಗಿ ಚಿಣ್ಣರ ನಡಿಗೆಯ ಕಾರ್ಯಕ್ರಮ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಜಲ ಜಾಗೃತಿಯನ್ನು ಹಲವು ಹಂತಗಳಲ್ಲಿ ನಡೆಸುವ ಆವಶ್ಯಕತೆ ಇದೆ ಎಂದರು.
ಸನ್ಮಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹುದ್ನಾನ್, ಮುಂಝೀರ್, ಮುಬಾರಿಶ್, ಅಬ್ದುಲ್ ಬಾಸಿತ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.