ತಣ್ಣೀರುಬಾವಿ ಬೀಚ್ ಸಮೀಪ ರಸ್ತೆ ಅಪಘಾತ: ಐವರಿಗೆ ಗಾಯ
Update: 2017-04-16 10:08 IST
ಮಂಗಳೂರು, ಎ.16: ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಣ್ಣೀರುಬಾವಿ ಬೀಚ್ ನಲ್ಲಿ ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ನಡೆದಿದೆ.
ಅಪಘಾತದಿಂದ ಮಂಗಳೂರು ಆಸುಪಾಸಿನ ನಿವಾಸಿಗಳಾದ ಸಂಗೀತಾ, ತ್ರಿವೇದಿ, ಜೀವನ್ ಡಿಸೋಜ, ಆರ್ಯ ಹಾಗೂ ಡೇವಿಡ್ ಗಾಯಗೊಂಡಿದ್ದಾರೆ. ಗಾಯಾಳುಗಳು ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ತಣ್ಣೀರುಬಾವಿ ಬೀಚ್ ನಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಗಾಯಾಳುಗಳಿಗೆ ನಗರದ ಖಾಸಗಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಿಡುಗಡೆಗೊಂಡಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.