×
Ad

ಜಾತ್ಯತೀತ ಪಕ್ಷಗಳ ಪರ್ಯಾಯ ಮೈತ್ರಿಕೂಟ ಅನಿವಾರ್ಯ: ಪವಾರ್

Update: 2017-04-16 14:40 IST

ಕೊಚ್ಚಿ, ಎ. 16: ದೇಶದಲ್ಲಿ ಜಾತ್ಯತೀತತೆಯ ಸಂರಕ್ಷಣೆಗೆ ಜಾತ್ಯತೀತ ಪಕ್ಷಗಳ ಮೈತ್ರಿಕೂಟವನ್ನು ರಚಿಸುವುದು ಅತಿಅಗತ್ಯವೆಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಇಂದಿನ ಸ್ಥಿತಿಯಲ್ಲಿ ಯಾವುದಾದರೂ ಒಂದೇ ಪಕ್ಷಕ್ಕೆ ಬಿಜೆಪಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಪರ್ಯಾಯ ಮೈತ್ರಿಕೂಟದ ಮುಂದಿನ ಸಾಲಲ್ಲಿ ಎನ್‌ಸಿಪಿ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಅಸುರಕ್ಷಿತ ಅವಸ್ಥೆಯನ್ನು ಎದುರಿಸುತ್ತಿವೆ.

 ವಿದ್ಯುನ್ಮಾನ ಮತಯಂತ್ರದ ವಿಷಯದಲ್ಲಿ ಸ್ಪಷ್ಟವಾದ ಸಂದೇಹಗಳು ಇವೆ. ಗೋವಾದಲ್ಲಿ ಬಿಜೆಪಿ ಸರಕಾರ ರೂಪುಗೊಳ್ಳುವುದಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಅಲ್ಲಿ ಕಾಂಗ್ರೆಸ್‌ಗೆ ಸರಕಾರ ಕಟ್ಟಲು ಸಾಧ್ಯವಿತ್ತು. ಅವರು ಸೂಕ್ತ ಸಮಯದಲ್ಲಿ ಕಾರ್ಯವೆಸಗಲಿಲ್ಲ. ಮತ್ತು ಅಲ್ಲಿ ಎನ್‌ಸಿಪಿಯ ಶಾಸಕ ಬಿಜೆಪಿಗೆ ಬೆಂಬಲ ನೀಡಿಲ್ಲ. ಮತದಾನದಲ್ಲಿ ಭಾಗವಹಿಸಿಲ್ಲ. ಫೋನ್ ವಂಚನೆಗೆ ಬಲಿಪಶುವಾದ ಕೇರಳ ಮಾಚಿ ಸಚಿವ ಶಶೀಂದ್ರನ್‌ರ ನಿರಪಾಧಿತ್ವ ಸಾಬೀತಾದರೆ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸುವ ವಿಚಾರ ರಾಜ್ಯ ಘಟಕ ತೀರ್ಮಾನಿಸಬೇಕೆಂದು ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News