“ಸಿನೆಮಾಕ್ಕೆ ಬಾಲ ನಟ,ನಟಿ ಬೇಕಾಗಿದ್ದಾರೆ” ಜಾಹೀರಾತು ಕೊಟ್ಟು ಲಕ್ಷಾಂತರ ರೂ. ಪಂಗನಾಮ ಹಾಕಿದ ತಂಡದ ಸೆರೆ

Update: 2017-04-16 10:48 GMT

ತಿರುವನಂತಪುರಂ, ಎ. 16: ಸಿನೆಮಾದಲ್ಲಿ ನಟಿಸಲು ಹೊಸಮುಖಗಳಿಗೆ ಅವಕಾಶವಿದೆ ಎಂದುಜಾಹೀರಾತು ನೀಡಿ 50 ಲಕ್ಷರೂಪಾಯಿ ವಂಚನೆ ನಡೆಸಿದ ತಂಡವನ್ನು ತಿರುವನಂತಪುರಂ ನಗರ ಪೊಲೀಸರು ಬಂಧಿಸಿದ್ದಾರೆ.

   ಚೆತನ್ಯಕ್ರಿಯೇಶನ್ ಎನ್ನುವ ಬ್ಯಾನರ್ ಹುಟ್ಟುಹಾಕಿ ಹೊಸ ಬಾಲನಟ, ನಟಿಯರು ಬೇಕಾಗಿದ್ದಾರೆಂದು ತಿರುವನಂತಪುರಂನ ಎ. ರಾಂ ರಂಜಿತ್, ಕಲ್ಲಿಕೋಟೆಯ ಸತೀಶ್‌ಕುಮಾರ್, ಚಾತ್ತಂಬರ ಶೈಜು ಎಂಬ ಮೂವರಿದ್ದ ವಂಚಕರ ತಂಡ ಪತ್ರಿಕೆಗಳಿಗೆ ಜಾಹೀರಾತು ನೀಡಿ,ಆನಂತರ ತಿರುವನಂಪುರಂನ ಒಂದು ಪ್ರಸಿದ್ಧ ಹೊಟೇಲ್‌ನಲ್ಲಿ ಮಕ್ಕಳ ಅಡಿಶನ್‌ಕೂಡಾ ನಡೆಸಿತ್ತು. ಆಯ್ಕೆಯಾದ ಮಕ್ಕಳ ಹೆತ್ತವರಿಗೆ ಫೋನ್ ಮಾಡಿ ಸಿನೆಮಾ ಚಿತ್ರೀಕರಣ ನ್ಯೂಝಿಲೆಂಡ್, ದುಬೈ, ಮುನ್ನಾರ್ ಮುಂತಾದೆಡೆ ಇದೆ. ಮಕ್ಕಳ ಖರ್ಚನ್ನು ಕಂಪೆನಿ ವಹಿಸಿಕೊಳ್ಳುತ್ತದೆ. ಮಕ್ಕಳ ಜೊತೆ ಹೆತ್ತವರು ಬರಬೇಕು. ಅವರ ಖರ್ಚನ್ನು ಸ್ವಯಂ ಅವರೇ ನೋಡಿಕೊಳ್ಳಬೇಕಾಗುತ್ತದೆ ಎಂದು ಮಕ್ಕಳ ಪೋಷಕರಿಂದ ಐವತ್ತು ಲಕ್ಷದವರೆಗೂ ಹಣವನ್ನು ಸಂಗ್ರಹಿಸಿ ಪಂಗನಾಮ ಹಾಕಿತ್ತು. ಮೋಸಹೋದವರು ತಿರುವನಂತಪುರಂ ನಗರ ಪೊಲೀಸ್ ಕಮಿಶನರ್‌ಗೆ ದೂರು ನೀಡಿದ್ದರು.

 ನಂತರ ವಂಚಕರನ್ನು ಬಂಧಿಸಲಿಕ್ಕಾಗಿ ಶ್ಯಾಡೊ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ವಂಚಕರ ತಂಡ ಇನ್ನೊಂದು ಬ್ಯಾನರ್ ಹುಟ್ಟುಹಾಕಿ ಬೇರೊಂದು ಮೋಸಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶ್ಯಾಡೊಪೊಲೀಸರು ತಂಡವನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News