×
Ad

ಸಾಮೂಹಿಕ ವಿವಾಹ ಪುಣ್ಯಕಾರ್ಯ: ವಸಂತ ಬಂಗೇರ

Update: 2017-04-16 23:07 IST

ಬೆಳ್ತಂಗಡಿ, ಎ.16: ಸಾಮೂಹಿಕ ವಿವಾಹಗಳು ಪುಣ್ಯಕಾರ್ಯವಾಗಿದ್ದು ಬಡ ಕುಟುಂಬಗಳ ಯುವತಿಯರಿಗೆ ಬದುಕನ್ನು ನೀಡುತ್ತದೆ. ಮದುವೆಗೆ ಸಾಲ ಮಾಡಿ ಅದನ್ನು ತೀರಿಸಲು ಜೀವನವಿಡೀ ಪರದಾಡುವುದನ್ನು ತಪ್ಪಿಸಲು ಸರಳ ಸಾಮೂಹಿಕ ವಿವಾಹಗಳಿಂದ ಸಾಧ್ಯ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ  ಹೇಳಿದರು.

ಕಕ್ಕಿಂಜೆಯಲ್ಲಿ ಮನಾರತ್ ಅಲ್ ಮಸಾಅದ್ ವೆಲ್ಫೇರ್ ಎಸೋಸಿಯೇಶನ್ ಕಕ್ಕಿಂಜೆ ವತಿಯಿಂದ ಏರ್ಪಡಿಸಲಾಗಿದ್ದ ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದ.ಕ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ನಿಖಾಹ್‌ ನೇತೃತ್ವ ವಹಿಸಿದ್ದರು. ಸಭಾ ಕಾರ್ಯಕ್ರಮದ ಉಧ್ಘಾಟನೆಯನ್ನು ದಾರುಸ್ಸಲಾಂ ದ್‌ಅವಾ ಕಾಲೇಜು ಬೆಳ್ತಂಗಡಿ ಇದರ ಪ್ರಾಂಶುಪಾಲರಾದ ಸತ್ವಾಹಾ ಜಿಫ್ರಿ ತಂಙಳ್ ನೆರವೇರಿಸಿದರು.

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಕೆ. ಪಿ. ಅಬ್ದುಲ್ ಜಬ್ಬಾರ್ ದುಆ ನೆರವೇರಿಸಿದರು. ಕಕ್ಕಿಂಜೆ ಮುದರ್ರಿಸ್ ಐ.ಕೆ. ಮೂಸಾ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮನಾರತ್ ಅಲ್ ಮಸಾಅದ್ ವೆಲ್ಫೇರ್ ಅಸೋಸಿಯೇಶನ್ ಕಕ್ಕಿಂಜೆ ಇದರ ಅಧ್ಯಕ್ಷ ಹಸನಬ್ಬ ಚಾರ್ಮಾಡಿ ಸ್ವಾಗತಿಸಿದರು.

ಈ ಸಂದರ್ಭ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಕೆ. ವಸಂತ ಬಂಗೇರರನ್ನು, ಸಮಸ್ತ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲು ಅವರನ್ನು ಹಾಗೂ ಎಂಜೆಎಂ ಕಕ್ಕಿಂಜೆ ಇದರ ಗೌರವಾಧ್ಯಕ್ಷ ಪಿ.ಕೆ.ಮೊಯ್ದಿನ್ ಕುಂಞಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಲೀಂ ತಂಙಳ್ ಹಮೀದ್ ದಾರಿಮಿ, ಬಶೀರ್ ದಾರಿಮಿ, ಹಂಝ ಮುಸ್ಲಿಯಾರ್, ಸಲೀಂ ಇರ್ಫಾನಿ, ಎಂಜೆಎಂ ಕಕ್ಕಿಂಜೆ ಇದರ ಅಧ್ಯಕ್ಷ ಎ ಅಬ್ದುಲ್ಲ, ಕೆ.ಎ. ಮುಹಮ್ಮದ್, ಪಿ.ಎಚ್. ಹಸೈನಾರ್, ಪಿ.ಕೆ. ಅಮ್ಮಬ್ಬ, ಸ್ವಾಲಿ ಹಾಜಿ, ಸಾಜಿಲ್ ಉಜಿರೆ, ದ.ಕ. ಜಿಲ್ಲಾ ಮುಸ್ಲಿಂ ಐಕ್ಯತಾ ಸಮಿತಿಯ ಅಧ್ಯಕ್ಷ ಕೆಂಪಿ ಮುಸ್ತಫಾ,  ಹನೀಫ್ ಗೋಳ್ತಮಜಲು, ಬಿ.ಎಂ. ಅಬ್ದುಲ್ ಹಮೀದ್ ಉಜಿರೆ, ಎಂ.ಬಿ. ನಝೀರ್ ಮಠ, ಎಪಿಎಂಸಿ ಸದಸ್ಯ ಗಫೂರ್ ಪುದುವೆಟ್ಟು, ಎ. ಉಸ್ಮಾನ್ ಮಂಗಳೂರು, ನೆರಿಯ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಬಲಿಪಾಯ, ಅಬ್ದುಲ್ ಹಮೀದ್, ಸಮಿತಿಯ ಪದಾಧಿಕಾರಿಗಳಾದ ಕಾರ್ಯದರ್ಶಿ ಬಶೀರ್ ಪಿ.ಕೆ., ಕೆ.ಎ. ರಹ್ಮಾನ್, ಕೆ.ಎ .ಖಾದರ್, ಅಬ್ದುಲ್ಲ ಎ.ಕೆ., ದಾವೂದ್, ಹನೀಫ್ ಪಿ.ಕೆ., ಇಸ್ಮಾಯಿಲ್ ಹನೀಫ್, ಮುಹಮ್ಮದ್ ಪಿ.ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆ.ಎಂ. ಕೊಡುಂಗಾಯ ಹಾಗೂ ಶರೀಫ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News