×
Ad

ಮುಂಬೈಯಲ್ಲಿ ತಲೆಯೆತ್ತಲಿದೆ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ

Update: 2017-04-17 11:58 IST
ಬುರ್ಜ್ ಖಲೀ‍ಫಾ

ಹೊಸದಿಲ್ಲಿ, ಎ.17: ದುಬೈಯಲ್ಲಿರುವ 163 ಮಹಡಿಗಳ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾಕ್ಕಿಂತಲೂ ಎತ್ತರದ ಕಟ್ಟಡವು ದೇಶದ ವಾಣಿಜ್ಯ ರಾಜಧಾನಿ ಮುಂಬೈಯ ಪೂರ್ವದಲ್ಲಿರುವ ನಿರುಪಯೋಗಿ ಭೂಮಿಯಲ್ಲಿ ತಲೆಯೆತ್ತಲಿದೆ. ಈ ಕಟ್ಟಡದ ಪಕ್ಕದಲ್ಲಿ ನಿರ್ಮಾಣವಾಗಲಿರುವ ಸಾಲುಮರಗಳ ವಿಶಾಲ ರಾಜಮಾರ್ಗವು ಮುಂಬೈಯ ಮರೀನ್ ಡ್ರೈವ್ ಪ್ರದೇಶಕ್ಕಿಂತಲೂ ವಿಸ್ತಾರವಿರಲಿದೆ.

ಇದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ಕನಸಿನ ಯೋಜನೆಯಾಗಿದೆ. ಮುಂಬೈ ಪೋರ್ಟ್ ಟ್ರಸ್ಟ್ ನಗರದ ಅತ್ಯಂತ ಶ್ರೀಮಂತ ಭೂಮಾಲಕನೆಂದು ತಿಳಿದಿರುವ ಗಡ್ಕರಿ ಟ್ರಸ್ಟಿನ ಬಳಿಯಿರುವ ವಿಸ್ತಾರವಾದ ಕೈಗಾರಿಕಾ ಪಾಳು ಭೂಮಿಗಳನ್ನು ಉಪಯೋಗಿಸಿ ಈ ಬೃಹತ್ ಯೋಜನೆಗೆ ಕೈಹಾಕುವ ಉದ್ದೇಶ ಹೊಂದಿದ್ದಾರೆ.

ಗಡ್ಕರಿ ಪ್ರಕಾರ ಈ ಅದ್ದೂರಿ ಯೋಜನೆಯ ನಕ್ಷೆಗಳು ಸಿದ್ಧವಾಗಿದ್ದು, ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ. ‘‘ನಮ್ಮ ಭೂಮಿಯನ್ನು ನಾವು ಬಿಲ್ಡರುಗಳಿಗೆ ನೀಡುತ್ತಿಲ್ಲ. ಮರೀನ್ ಡ್ರ್‌ವ್ ಗಿಂತಲೂ ಮೂರು ಪಟ್ಟು ದೊಡ್ದದಾಗಿರವ ಹಸಿರು ಹಾಗೂ ಸ್ಮಾರ್ಟ್ ರಸ್ತೆಯನ್ನು ನಿರ್ಮಿಸಲಿದ್ದೇವೆ ಹಾಗೂ ಬುರ್ಜ್ ಖಲೀಫಾವನ್ನೂ ಮೀರಿಸುವ ಕಟ್ಟಡ ನಿರ್ಮಿಸಲಿದ್ದೇವೆ’’ ಎಂದು ಹೇಳಿದ್ದಾರೆ ಗಡ್ಕರಿ. ಹೊಸದಾಗಿ ನಿರ್ಮಿಸಲಾಗುವ 7 ಕಿ.ಮೀ. ಉದ್ದದ ಮರೀನ್ ಡ್ರೈವೆ ಮಜಗಾಂವ್ ಡಾಕ್ ಮತ್ತು ವಡಾಲ ನಡುವೆ ಇರಲಿದೆ.

ಮುಂಬೈ ನಗರಿಯಲ್ಲಿ ಅತಿ ಹೆಚ್ಚು ಭೂಮಿಯನ್ನು ಬಾಂಬೆ ಪೋರ್ಟ್ ಟ್ರಸ್ಟ್ ಹೊಂದಿದ್ದು, ಸುಮಾರು 500 ಹೆಕ್ಟೇರ್ ಭೂಮಿಯಲ್ಲಿ ಬಂದರಿನ ಕಾರ್ಯಚಟುವಟಿಕೆಗಳು, ವಾಣಿಜ್ಯಕ ಚಟುವಟಿಕೆಗಳು, ಕಚೇರಿಗಳು ರಿಟೇಲ್, ಮನೋರಂಜನಾ ಕೇಂದ್ರಗಳು ಮತ್ತು ಕನ್ವೆನ್ಶನ್ ಸೆಂಟರುಗಳನ್ನು ಅಭಿವೃದ್ಧಿ ಪಡಿಸುವ ಯೋಚನೆಯಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News