ಮದ್ರಸ ಅಧ್ಯಾಪಕರ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ: ದೇರಳಕಟ್ಟೆ ರೇಂಜ್ ಚಾಂಪಿಯನ್
Update: 2017-04-17 12:55 IST
ಮಂಗಳೂರು, ಎ.17: ಪರೇಕ್ಕಳ ಕುಂಡೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಮದ್ರಸ ಅಧ್ಯಾಪಕರ 14ನೆ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ದೇರಳಕಟ್ಟೆ ರೇಂಜ್ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದೆ.
ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಳ್ಮ ರೆಂಜಾಡಿ ಮದ್ರಸ ವಿದ್ಯಾರ್ಥಿಗಳಾದ ಮುಹಮ್ಮದ್ ನೌಶೀರ್, ಮುಹಮ್ಮದ್ ಮುಝ್ಝಮ್ಮಿಲ್, ಮುಹಮ್ಮದ್ ಕಾಶಿಫ್ ರಾಜ್ಯ ಮಟ್ಟಕ್ಕೆ ಆಯ್ಕೆಯಗಿದ್ದಾರೆ.
ವಿದ್ಯಾರ್ಥಿನಿಯರ ಮ್ಯಾಗಝಿನ್ ರಚನೆ ಸ್ಪರ್ಧೆಯಲ್ಲಿ ಕಿನ್ಯ ಕುತುಬಿಯ್ಯಾ ಮದ್ರಸ ವಿದ್ಯಾರ್ಥಿನಿಯರು ರಚಿಸಿದ ಮ್ಯಾಗಝಿನ್ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.