ಮಿತ್ತರಾಜೆ: ಎಸ್ಸೆಸ್ಸೆಫ್ ನಿಂದ ಮಹಿಳೆಯರಿಗೆ ಅಧ್ಯಯನ ಶಿಬಿರ
Update: 2017-04-17 15:49 IST
ಸಾಲೆತ್ತೂರು, ಎ.16: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ಮಿತ್ತರಾಜೆ ಶಾಖೆಯ ವತಿಯಿಂದ ಇಂದು ಮಹಿಳೆಯರಿಗೆ ಅಧ್ಯಯನ ಶಿಬಿರ ನಡೆಯಿತು.
ಇದರ ಅಧ್ಯಕ್ಷತೆಯನ್ನು ಶಾಖಾ ಅಧ್ಯಕ್ಷ ಹಮೀದ್ ವಹಿಸಿದ್ದರು. ಸ್ಥಳೀಯ ಖತೀಬ್ ಅಬೂಬಕರ್ ಮದನಿ ಉದ್ಘಾಟನಾ ಭಾಷಣ ಮಾಡಿದರು. ಹಂಝ ಮದನಿ ಮಿತ್ತೂರ್ ತರಗತಿ ಮಂಡನೆ ನಡೆಸಿದರು. ವೇದಿಕೆಯಲ್ಲಿ ಸ್ಥಳೀಯ ಮುಅಲ್ಲಿಂ ಶರೀಫ್ ಹನೀಫಿ ಹಾಗೂ ಜಮಾಅತ್ ಕಾರ್ಯದರ್ಶಿ ಉಮರ್ ಅಬ್ಬೆಮ್ಮಾರ್ ಉಪಸ್ಥಿತರಿದ್ದರು.