ಶಬರಿಮಲೆ ದೇವಸ್ಥಾನದಲ್ಲಿ ಯುವತಿಯರ ಉಪಸ್ಥಿತಿ ತೋರಿಸುತ್ತಿರುವ ಚಿತ್ರಗಳು ಬಹಿರಂಗ: ತನಿಖೆಗೆ ಆದೇಶ

Update: 2017-04-17 12:58 GMT

 ತಿರುವನಂತಪುರ,ಎ.17: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 10-50 ವರ್ಷ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದ್ದರೂ, ಅಲ್ಲಿ ಕೆಲವು ಯುವತಿಯರ ಉಪಸ್ಥಿತಿಯನ್ನು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕೇರಳ ಸರಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಈ ಸಂಬಂಧ ತನಿಖೆಯನ್ನು ಆರಂಭಿಸುವಂತೆ ಮತ್ತು ಚಿತ್ರಗಳ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವಂತೆ ದೇವಸ್ವಂ ಸಚಿವ ಕೆ.ಸುರೇಂದ್ರನ್ ಅವರು ದೇವಸ್ವಂ ಜಾಗ್ರತ ಇಲಾಖೆಗೆ ನಿರ್ದೇಶ ನೀಡಿದರು.

ತನಗೆ ಬಂದಿರುವ ದೂರಿನಂತೆ, ಕೊಲ್ಲಂ ಉದ್ಯಮಿಯೋರ್ವರು ಶಬರಿಮಲೆ ಕ್ಷೇತ್ರದ ದರ್ಶನಕ್ಕೆ ವಿಶೇಷ ಹಕ್ಕುಗಳನ್ನು ಹೊಂದಿದ್ದಾರೆ ಮತ್ತು ನಿಷೇಧಿತ ವಯೋಮಾನದ ಕೆಲವು ಮಹಿಳೆಯರು ಅವರೊಂದಿಗೆ ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ವಯೋಮಿತಿಯ ಸಂಪ್ರದಾಯವನ್ನು ಪಾಲಿಸಿ ಮಹಿಳೆಯರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಯಾವುದೇ ನಿರ್ಬಂಧಗಳಿಲ್ಲ ಎಂದು ತಿಳಿಸಿದ ಅವರು, ವಿಐಪಿ ದರ್ಶನದ ಹೆಸರಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಪಡೆಯುವುದು ಅಕ್ರಮವಾಗುತ್ತದೆ ಮತ್ತು ಇಂತಹ ಪದ್ಧತಿಗಳನ್ನು ನಿಲ್ಲಿಸಲು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News