×
Ad

ಸಾಮೂಹಿಕ ವಿವಾಹದಲ್ಲಿ 22 ಜೋಡಿ ಹಸೆಮಣೆಗೆ

Update: 2017-04-17 21:12 IST

ಉಡುಪಿ, ಎ.17: ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಿಲ್ಲಾ ಮೊಗವೀರ ಯುವ ಸಂಘಟನೆಯ ಜಂಟಿ ಆಶ್ರಯದಲ್ಲಿ ಮೊಗವೀರ ಸಮಾಜದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಸೋಮವಾರ ಅಂಬಲಪಾಡಿ ಫ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು..

ವೇದಮೂರ್ತಿ ವೇದವ್ಯಾಸ ಐತಾಳ್ ಪೌರೋಹಿತ್ಯದಲ್ಲಿ ಒಟ್ಟು 22 ಜೋಡಿ ಹಸಮಣೆಗೆ ಏರಿತು. ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್ ಮಾತನಾಡಿ, ಈವರೆಗೆ ಒಟ್ಟು 9 ಸಾಮೂಹಿಕ ವಿವಾಹಗಳ ಮೂಲಕ 218 ಜೋಡಿಗೆ ಮದುವೆ ಮಾಡಿದ್ದೇವೆ. ಮುಂದೆಯೂ 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮೊಗವೀರ ಮುಖಂಡ ಕೇಶವ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News