×
Ad

ವಿಮಾನ ಬಂದ್‌ಗೆ ರಾಜಕೀಯ ಕಾರಣವಿಲ್ಲ : ಚೀನಾ

Update: 2017-04-17 21:22 IST

ಬೀಜಿಂಗ್, ಎ. 17: ಚೀನಾದ ಸರಕಾರಿ ವಿಮಾನಯಾನ ಸಂಸ್ಥೆ ಏರ್ ಚೀನಾ ತನ್ನ ಉತ್ತರ ಕೊರಿಯ ಹಾರಾಟವನ್ನು ನಿಲ್ಲಿಸಿರುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ಚೀನಾ ಸೋಮವಾರ ಹೇಳಿದೆ.

ಏರ್ ಚೀನಾ ತನ್ನ ಬೀಜಿಂಗ್-ಪ್ಯಾಂಗ್‌ಯಾಂಗ್ ಮಾರ್ಗದ ವಿಮಾನ ಹಾರಾಟವನ್ನು ನಿಲ್ಲಿಸಿದೆ ಎಂದು ಸರಕಾರಿ ಟಿವಿ ಸಿಸಿಟಿವಿ ಶುಕ್ರವಾರ ವರದಿ ಮಾಡಿತ್ತು. ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಉತ್ತರ ಕೊರಿಯದ ಮೇಲೆ ಒತ್ತಡ ಹೇರುವುದಕ್ಕಾಗಿ ಚೀನಾ ಈ ಕ್ರಮ ತೆಗೆದುಕೊಂಡಿದೆ ಎಂಬ ಊಹಾಪೋಹಗಳು ಹಬ್ಬಿದ್ದವು.

ಆದರೆ, ವಿಮಾನಯಾನ ಕಂಪೆನಿಯ ಈ ನಿರ್ಧಾರದಲ್ಲಿ ತನ್ನ ಸರಕಾರದ ಪಾತ್ರವಿಲ್ಲ ಹಾಗೂ ಆ ನಿರ್ಧಾರವು ಸಂಪೂರ್ಣವಾಗಿ ಮಾರುಕಟ್ಟೆ ಆಧಾರಿತವಾಗಿದೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News