ಲಂಡನ್: ನೈಟ್ ಕ್ಲಬ್ ಮೇಲೆ ಆಸಿಡ್ ದಾಳಿ; 12 ಮಂದಿಗೆ ಗಾಯ
Update: 2017-04-17 21:28 IST
ಲಂಡನ್, ಎ. 17: ಲಂಡನ್‌ನ ಕಿಕ್ಕಿರಿದ ನೈಟ್ ಕ್ಲಬ್ ಒಂದರಲ್ಲಿ ನಡೆದ ಆಸಿಡ್ ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಸಂತ್ರಸ್ತರ ಪೈಕಿ ಇಬ್ಬರು ಪುರುಷರು ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ 10 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.
ಪೂರ್ವ ಲಂಡನ್‌ನ ಕ್ಲಬ್ ಒಂದರಲ್ಲಿ ಸೋಮವಾರ ಮುಂಜಾನೆ ಜನರ ಮೇಲೆ ಆಸಿಡನ್ನು ಎಸೆಯಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನಲ್ಲಿ ಸುಮಾರು 600 ಮಂದಿಯಿದ್ದರು.