ಅತ್ಯಾಚಾರಿ ಆರೋಪಿಗೆ ಜಾಮೀನು
Update: 2017-04-17 22:48 IST
ಮಂಗಳೂರು, ಎ.17: ಯುವತಿಯ ಅತ್ಯಾಚಾರಗೈದು ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿಗೆ ಮಂಗಳೂರು 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬಂಟ್ವಾಳ ತಾಲೂಕು ಕೊಡಂಬೆಟ್ಟುವಿನ ಹೆನ್ರಿ ಡಿಸೋಜ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ. ಸ್ಥಳೀಯ ಅವಿವಾಹಿತೆಯು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ 2016 ಮೇ.10 ರಂದು ಮಗುವಿಗೆ ಜನ್ಮ ನೀಡಿದ್ದರು. ತನಿಖೆ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಆರೋಪಿ ಹೆನ್ರಿ ಡಿಸೋಜನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆರೋಪಿಯು ಯುವತಿಗೆ ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿ ಮೋಸ ಮಾಡಿದ್ದ.ಈ ಬಗ್ಗೆ ಸಂತ್ರಸ್ತೆಯು ಬಂಟ್ವಾಳ ನ್ಯಾಯಾಧೀಶರಲ್ಲಿ ದೂರು ಹೇಳಿಕೊಂಡಿದ್ದರು.
ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಜಾಮೀನು ಲಭಿಸಿದೆ.