×
Ad

ಮಂಗಳೂರಿಗೆ ಆಗಮಿಸಿದ ಕ್ರಿಕೆಟಿಗ ಅಝರುದ್ದೀನ್, ಸುನೀಲ್ ಜೋಶಿ

Update: 2017-04-17 22:57 IST

ಸುರತ್ಕಲ್, ಎ.17: ಕ್ರಿಕೆಟ್ ಲೀಗೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹಾಗೂ ತಂಡದ ಮಾಜಿ ಆಟಗಾರ ಸುನೀಲ್ ಜೋಶಿ ಮಂಗಳೂರಿಗೆ ಆಗಮಿಸಿದ್ದಾರೆ. 

ಉಡುಪಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಸ್ಯಾಬ್ ಉಡುಪಿ ಪ್ರೀಮಿಯರ್ ಲೀಗ್ -2017- ಟಿ10 ಹಾರ್ಡ್ ಟೆನ್ನಿಸ್ ಬಾಲ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಸೀಸನ್-2ಗೆ ಪಣಂಬೂರು ಎನ್‌ಎಂಪಿಟಿ ಮೈದಾನದಲ್ಲಿ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಇಬ್ಬರು ಕ್ರಿಕೆಟ್ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬಲೂನ್ ಹಾರಿಸುವ ಮೂಲಕ ಲೀಗ್ ಗೆ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವಾ, ಐವನ್ ಡಿಸೋಜ, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್, ಉದ್ಯಮಿ ಮುಮ್ತಾಝ್ ಅಲಿ, ಸ್ಯಾಬ್ ಆ್ಯಂಡ್ ಅಸೋಸಿಯೇಟ್ ಕಂಪೆನಿಯ ಅಧ್ಯಕ್ಷ ಸಲಾಹುದ್ದಿನ್ ಸಲ್ಮಾನ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಮುಬೀನ್, ಅಧ್ಯಕ್ಷ ಸಾದಿಕ್ ಕಾಪು, ಹಕೀಂ ಫಾಲ್ಕಾನ್, ಎಂ.ಬಿ. ಸದಾಶಿವ, ಗುಲಾಂ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News