×
Ad

ಎ.19 ರಿಂದ ಉಡುಪಿ, ದಕ ಜಿಲ್ಲೆಯಾದ್ಯಂತ ಮುಹಿಮ್ಮಾತ್ ಸಂದೇಶ ಜಾಥಾ

Update: 2017-04-17 23:42 IST

ಪಡುಬಿದ್ರಿ,ಎ.17: ಮುಹಿಮ್ಮಾತ್ ವಿದ್ಯಾಸಂಸ್ಥೆ ಕುಂಬಳೆ ಇದರ ಸಿಲ್ವರ್ ಜ್ಯುಬಿಲಿ ಪ್ರಚಾರಾರ್ಥ ಸಂದೇಶ ಜಾಥಾ ಎ.19 ಹಾಗೂ 20ರಂದು ನಡೆಯಲಿದೆ.

ಎ.19ರಂದು ಉಡುಪಿ ಜಿಲ್ಲೆಯ ಕುಂದಾಪುರದ ಹಝ್ರತ್ ಯೂಸುಫ್ ವಲಿಯುಲ್ಲಾಹಿ ದರ್ಗಾ ಝಿಯಾರತ್‌ನೊಂದಿಗೆ ಬೆಳಗ್ಗೆ 7:30ಕ್ಕೆ ಆರಂಗೊಳ್ಳುವ ಜಾಥಾವು ಹಂಗಳೂರು, ಬ್ರಹ್ಮಾವರ, ಉಡುಪಿ, ಕಟಪಾಡಿ, ಕಾಪು,ಪಡುಬಿದ್ರಿ, ಮುಲ್ಕಿ, ಕಿನ್ನಿಗೋಳಿ, ಮೂಡಬಿದ್ರಿ, ಬಜ್ಪೆ, ಕೈಕಂಬದಲ್ಲಿ ಸಾಗಲಿದೆ.

ಎ.20ರಂದು ಬೆಳಗ್ಗೆ 8ಕ್ಕೆ ಅಡ್ಯಾರು ಕಣ್ಣೂರು ಹಝ್ರತ್ ಯೂಸುಫ್ ವಲಿಯುಲ್ಲಾಹಿ ದರ್ಗಾದಿಂದ ಹೊರಡುವ ಜಾಥವು  ಫರಂಗಿಪೇಟೆ, ಕೈಕಂಬ, ಪಾಣೆಮಂಗಳೂರು, ಪೂಂಜಾಲಕಟ್ಟೆ, ಗುರುವಾಯನಕರೆ, ಬೆಳ್ತಂಗಡಿ, ಕಲ್ಲೇರಿ, ಉಪ್ಪಿನಂಗಡಿ, ಪುತ್ತೂರು, ಕುಂಬ್ರ, ಜಾಲ್ಸೂರು, ಸುಳ್ಯದಲ್ಲಿ ಸಾಗಲಿದೆ.

ಜಾಥಾದಲ್ಲಿ ಎಂ.ಎಸ್.ಎಂ .ಝೈನಿ ಕಾಮಿಲ್ ನೇತೃತ್ವ ವಹಿಸಲಿದ್ದು, ಹಾಫಿಳ್ ಸೂಫ್ಯಾನ್  ಸಖಾಫಿ, ಕೆ.ಎಂ.ಮುಸ್ತಪಾ ಹಿಮಮೀ ನಈಮಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News