×
Ad

ಶಾಂತಿ ಸಂದೇಶದೊಂದಿಗೆ ಡಿವೈಎಫ್ಐ ಜಾಥಾ

Update: 2017-04-17 23:50 IST

ಕಾಸರಗೋಡು, ಎ.17: ಶಾಂತಿ ಸಂದೇಶದೊಂದಿಗೆ ಡಿವೈಎಫ್ಐ ಜಿಲ್ಲಾ ಸಮಿತಿ ವತಿಯಿಂದ ಜಾಥಾ ಮತ್ತು ಸಮಾವೇಶ ಕಾಸರಗೋಡಿನಲ್ಲಿ ನಡೆಯಿತು

ಜಾಥಾ ನಾಯಕ  ಡಿವೈಎಫ್ ಐ  ಜಿಲ್ಲಾ ಕಾರ್ಯದರ್ಶಿ ಕೆ.ಮಣಿಕಂಠನ್ ರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಸಂಸದ ಪಿ.ಕರುಣಾಕರನ್ ಜಾಥಾಗೆ ಚಾಲನೆ  ನೀಡಿದರು.

ಉಳಿಯತ್ತಡ್ಕ, ಕೂಡ್ಲು, ಚೂರಿ, ಕರಂದಕ್ಕಾಡ್, ಮಲ್ಲಿಕಾರ್ಜುನ  ಕ್ಷೇತ್ರ ಪರಿಸರ, ತಾಯಲಂಗಾಡಿ,  ರೈಲ್ವೆ ನಿಲ್ದಾಣ ಮೂಲಕ  ತಳಂಗರೆ ಮಸೀದಿ ಬಳಿ ಜಾಥಾ ಸಮಾರೋಪಗೊಂಡಿತು. ಸಂಜೆ ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ನಡೆದ ಜಾತ್ಯತೀತ ಸಂಗಮವನ್ನು ಡಿವೈಎಫ್ ಐ ರಾಜ್ಯ ಕಾರ್ಯದರ್ಶಿ ಎಂ . ಸ್ವರಾಜ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News