ಬೈಕ್-ಟೆಂಪೋ ಟ್ರಾವೆಲ್ಲರ್ ಢಿಕ್ಕಿ: ಸವಾರನಿಗೆ ಗಾಯ
Update: 2017-04-18 17:28 IST
ಕಡಬ, ಎ.18. ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ಟೆಂಪೊ ಟ್ರಾವೆಲ್ಲರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರದಂದು ನಡೆದಿದೆ.
ಬೈಕ್ ಸವಾರ ಕೊಂಬಾರು ಮದಪರ್ಲ ನಿವಾಸಿ ಬಾಬು ಗೌಡರ ಪುತ್ರ ಶೇಷಪ್ಪ ಗೌಡ(47) ಎಂಬವರ ಕಾಲು ಮುರಿತಕ್ಕೊಳಗಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಳಿನೆಲೆಯಿಂದ ಕೊಂಬಾರಿಗೆ ತೆರಳುತ್ತಿದ್ದ ಬೈಕಿಗೆ ಕುಂದಾಪುರದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದ ಟೆಂಪೊ ಟ್ರಾವೆಲ್ಲರ್ ಢಿಕ್ಕಿ ಹೊಡೆದಿದ್ದರಿಂದಾಗಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.