ತಂದೆಯ ಕೊಲೆ ಆರೋಪಿಗೆ ಪೊಲೀಸ್ ಕಸ್ಟಡಿ
Update: 2017-04-18 17:31 IST
ಮೂಡುಬಿದಿರೆ, ಎ.18: ಹೊಸಬೆಟ್ಟು ಗ್ರಾಮದ ಕರಿಂಗಾನದಲ್ಲಿ ಶುಕ್ರವಾರ ಸಂಜೆ ತನ್ನ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪಿಗೆ ಮೂಡುಬಿದಿರೆ ಕೋರ್ಟ್ ಒಂದು ವಾರ ಪೊಲೀಸ್ ಕಸ್ಟಡಿ ವಿಧಿಸಿದೆ.
ಕಳೆದ ಶುಕ್ರವಾರ ಆರೋಪಿ ಡಾಲ್ಫಿ ಗೋವಿಯಸ್ ತನ್ನ ತಂದೆ ಪೌಲ್ ಗೋವಿಯಸ್ ರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಅದೇ ಹೊತ್ತಿಗೆ ಗುಡ್‌ಪ್ರೈಡೇ ಪ್ರಯುಕ್ತ ಚರ್ಚ್‌ಗೆ ಹೋಗಿದ್ದ ಆರೋಪಿಯ ಹಿರಿಯ ಸಹೋದರ ಸ್ಟಾನಿ ಗೋವಿಯಸ್ ವಾಪಾಸ್ ಮನೆಗೆ ಬಂದಾಗ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆರೋಪಿಯನ್ನು ನಂತರ ಅಜೆಕಾರಿನ ಆತನ ಪತ್ನಿ ಮನೆಯಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಒಂದು ವಾರಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.